ವಾಷಿಂಗ್ಟನ್: ಕೊವಿದ್-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.
ಕೊವಿದ್-19 ಸೋಂಕು ನಿಯಂತ್ರಣ ಮತ್ತು ತಡೆಗೆ ಸರ್ಕಾರದಿಂದ ತುರ್ತು ಬೆಂಬಲ ಅಗತ್ಯವಿರುವುದರಿಂದ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತಿದೆ. ಅಮೆರಿಕ ಸಂಸತ್ ಗುರುವಾರ ನಿಧಿ ಪ್ಯಾಕೇಜ್ ಬಿಡುಗಡೆಗೆ ಸರ್ವಾನುಮತದಿಂದ ಅಂಗೀಕರಿಸಿತ್ತು.
ಅಮೆರಿಕಾ ಸಂಸತ್ ನಿಂದ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಈ ಪ್ಯಾಕೇಜ್'ಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ.
Advertisement