ಕೊರೋನಾ ವೈರಸ್: ಚೀನಾದಲ್ಲಿ ಮತ್ತೆ 27 ಸೋಂಕಿತರ ಸಾವು, ಸಾವಿನ ಸಂಖ್ಯೆ 3097ಕ್ಕೇರಿಕೆ

ಚೀನಾದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಮತ್ತೆ 27 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3097ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಚೀನಾದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಮತ್ತೆ 27 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3097ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಚೀನಾದ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದ್ದು, ಚೀನಾದಲ್ಲಿ ಕೊರೋನಾ ಸೊಂಕಿಗೆ ಮತ್ತೆ 44 ಮಂದಿ ತುತ್ತಾಗಿದ್ದು, 84 ಮಂದಿಯಲ್ಲಿ ಸೋಂಕಿನ ಲಕ್ಷಣಗಳ ಶಂಕೆ ವ್ಯಕ್ತವಾಗಿದೆ. ಆ ಮೂಲಕ ಚೀನಾದಲ್ಲಿ ಸೋಂಕಿನ ಶಂಕಿತ ಪ್ರಕರಣಗಳ ಸಂಖ್ಯೆ 5,264ಕ್ಕೆ ಏರಿಕೆಯಾಗಿದೆ. ಅಂತೆಯೇ 1,661 ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 

ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಸುಮಾರು 23,074 ಮಂದಿಯ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ವೈದ್ಯಕೀಯ ವೀಕ್ಷಣೆಗೆೊಳಪಡಿಸಲಾಗಿದೆ. ಈ ಪೈಕಿ ಶನಿವಾರ 2021 ಮಂದಿಯಲ್ಲಿ ಸೋಂಕು ಇಲ್ಲ ಎಂಬ ಮಾಹಿತಿ ಮೇರೆಗೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com