ಕೊರೋನಾಗೆ ಇಡೀ ಇಟಲಿ ರಾಷ್ಟ್ರವೇ ಬಂದ್: ಮನೆಗಳಿಂದ ಹೊರಬರದಂತೆ ಪ್ರಧಾನಿ ಆದೇಶ

ಚೀನಾ ನಂತರ ಅತೀ ಹೆಚ್ಚು ಕೊರೋನಾ ವೈರಸ್ ಬಾಧೆಗೆ ಒಳಗಾಗಿರುವ ಇಟಲಿಯಲ್ಲಿ ವೈರಸ್ ತಡೆಯಲು ಅಲ್ಲಿನ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ವೈರಸ್ ತಡೆಯುವ ಸಲುವಾಗಿ ಇಡೀ ರಾಷ್ಟ್ರವನ್ನೇ ಇದೀಗ ಬಂದ್ ಮಾಡಿಸಲಾಗಿದ್ದು, ಈ ರೀತಿಯ ಬೆಳವಣಿಗೆ ವಿಶ್ವದಲ್ಲಿಯೇ ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಿಲಾನ್: ಚೀನಾ ನಂತರ ಅತೀ ಹೆಚ್ಚು ಕೊರೋನಾ ವೈರಸ್ ಬಾಧೆಗೆ ಒಳಗಾಗಿರುವ ಇಟಲಿಯಲ್ಲಿ ವೈರಸ್ ತಡೆಯಲು ಅಲ್ಲಿನ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ವೈರಸ್ ತಡೆಯುವ ಸಲುವಾಗಿ ಇಡೀ ರಾಷ್ಟ್ರವನ್ನೇ ಇದೀಗ ಬಂದ್ ಮಾಡಿಸಲಾಗಿದ್ದು, ಈ ರೀತಿಯ ಬೆಳವಣಿಗೆ ವಿಶ್ವದಲ್ಲಿಯೇ ಇದೇ ಮೊದಲು ಎಂದು ಹೇಳಲಾಗುತ್ತಿದೆ.

ವೈರಸ್ ತಡೆಯಲು ಇಟಲಿ ಪ್ರಧಾನಿ ಗುಯಿಸೆಪ್ ಕೊಂಟೆ ಅವರು ಇಟಲಿಯ ಪ್ರಜೆಗಲು ತಮ್ಮ ಮನೆಗಳಿಂದ ಹೊರಬರಕೂಡದು ಎಂದು ಆದೇಶಿಸಿದ್ದಾರೆ. ಇದರೆಂತ ಇಡೀ ಇಟಲಿ ರಾಷ್ಟ್ರವನ್ನೇ ಲಾಕ್ ಡೌನ್ ಮಾಡಲು ಆದೇಶಿಸಿದ್ದಾರೆ. 

ಕೊರೋನಾ ವ್ಯಾಧಿ ತೀವ್ರಗೊಂಡಾಗ ಚೀನಾದ ವುಹಾನ್ ಸೇರಿದಂತೆ ಕೆಲ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಜನರ ಸಂಚಾರಕ್ಕೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತಾದರೂ, ಇಡೀ ದೇಶಕ್ಕೆ ದೇಶವನ್ನೇ ಹೀಗೆ ನಿರ್ಬಂಧಕ್ಕೆ ಗುರಿಪಡಿಸಿದ್ದು ಇದೇ ಮೊದಲಾಗಿದೆ. ರೋಗ ತಡೆಗೆ ಇಟಲಿ ಸರ್ಕಾರ ಇತ್ತೀಚೆಗೆ ಹಲವು ಕ್ರಮಗಳನ್ನು ಘೋಷಿಸಿತ್ತಾದರೂ, ಅವುಗಳಿಗೆ ಸೂಕ್ತ ಜನಸ್ಪಂದನೆ ಸಿಕ್ಕಿರಲಿಲ್ಲ. ಅದರ ಬೆನ್ನಲ್ಲೇ ಸೋಂಕು ಪೀಡಿದರ ಸಂಖ್ಯೆ 10,000 ಗಡಿ ದಾಟಿತ್ತು. ಜೊತೆಗೆ ಕಳೆದೊಂದು ವಾರದಲ್ಲೇ ಸಾವಿನ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 

ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ಕ್ರಮ ಜಾರಿಗೆ ನಿರ್ಧರಿಸಿರುವ ಸರ್ಕಾರ, ದೇಶದ 6 ಕೋಟಿ ಜನರಿಗೆ ಮನೆಯಲ್ಲೇ ಇರಬೇಕೆಂದು ಸೂಚಿಸಿದೆ. ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪಬ್ ಗಳು, ಹೋಟೆಲ್, ಕೆಫೆಗಳನ್ನು ಮಂಗಳವಾರದಿಂದ ಸಂಪೂರ್ಣ ಬಂದ್ ಮಾಡಲಾಗಿದೆ. 

ಇಟಲಿಯಲ್ಲಿ ಈಗಾಗಲೇ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಅನಿವಾರ್ಯ ಪ್ರವಾಸಗಳನ್ನು ಹೊರತುಪಡಿಸಿದರೆ ವಿಕ್ಕ ಪ್ರವಾಸಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೆಲಸದ ನಿಮಿತ್ತ, ಆರೋಗ್ಯ ತಪಾಸಣೆ ಸಂಬಂಧ ಅಥವಾ ಇನ್ನಾವುದಾದರೂ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಪ್ರವಾಸಕ್ಕೆ ಅನುಮತಿಸಲಾಗುತ್ತಿದೆ. ಇಟಲಿಯ ಒಳಿತಾಗಾಗಿ ನಮ್ಮ ಹವ್ಯಾಸಗಳು ಬದಲಾಬೇಕು, ಬದಲಾಗುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೋನಾಗೆ ಮಂಗಳವಾರದವರೆಗೆ ಇಟಲಿಯಲ್ಲಿ 631 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com