ಕೊರೋನಾ ಸೋಂಕಿತರನ್ನು ಇರಿಸಿದ್ದ ಚೀನಾದ ಹೋಟೆಲ್ ಕಟ್ಟಡ ಕುಸಿತ: ಮೃತರ ಸಂಖ್ಯೆ 26ಕ್ಕೆ ಏರಿಕೆ

ಚೀನಾದಲ್ಲಿ ಕೊರೋನಾ ಸೋಂಕಿತರನ್ನು ಇರಿಸಿದ್ದ ಗ್ಸಿನ್ಜಿಯಾ ಎಕ್ಸ್ ಪ್ರೆಸ್ ಹೋಟೆಲ್ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದ್ದು, ಇನ್ನೂ ಮೂವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ. 

Published: 11th March 2020 06:02 PM  |   Last Updated: 11th March 2020 06:02 PM   |  A+A-


china-hotel1

ಕುಸಿದುಬಿದ್ದ ಹೋಟೆಲ್

Posted By : Lingaraj Badiger
Source : UNI

ಬೀಜಿಂಗ್: ಚೀನಾದಲ್ಲಿ ಕೊರೋನಾ ಸೋಂಕಿತರನ್ನು ಇರಿಸಿದ್ದ ಗ್ಸಿನ್ಜಿಯಾ ಎಕ್ಸ್ ಪ್ರೆಸ್ ಹೋಟೆಲ್ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದ್ದು, ಇನ್ನೂ ಮೂವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ. 

ಮಾಧ್ಯಮ ವರದಿ ಪ್ರಕಾರ, ಇಲ್ಲಿಯವರೆಗೆ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 68 ಜನರನ್ನು ಹೊರತೆಗೆಯಲಾಗಿದ್ದು, ಅವರಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ಹೊರತೆಗೆಯುವ ಕಾರ್ಯಾಚರಣೆ ಜಾರಿಯಲ್ಲಿದೆ. 

ಈ ಹೋಟೆಲ್ ನಲ್ಲಿ ಕೊರೋನಾ ಸೋಂಕಿತ ರೋಗಿಗಳನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿತ್ತು.

ಈ ಮಧ್ಯೆ, ಚೀನಾದಲ್ಲಿ ಕರೋನವೈರಸ್ ಮಹಾಮಾರಿ ಸೋಂಕಿನ ಪ್ರಕರಣಗಳ ಸಂಖ್ಯೆ 80,770 ಮೀರಿದ್ದು, ಸಾವಿನ ಸಂಖ್ಯೆ 3,158ಕ್ಕೆ ತಲುಪಿದೆ. 61,000 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಮಿತಿ ಬುಧವಾರ ತಿಳಿಸಿದೆ.

ರಾಜ್ಯ ಆರೋಗ್ಯ ಸಮಿತಿಯು ಚೀನಾದ 31 ಪ್ರಾಂತ್ಯಗಳಿಂದ ಒಟ್ಟು 80,778 ಕರೋನವೈರಸ್ ಸೋಂಕಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದೆ. ಇದರಲ್ಲಿ ಪ್ರಸ್ತುತ 16,145 ಜನರು ಅನಾರೋಗ್ಯದಿಂದ ಬಳಲುತ್ತಿದ್ದು, 4,492 ಜನರ ಸ್ಥಿತಿ ಗಂಭೀರವಾಗಿದೆ. 61,475 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇಲ್ಲಿಯವರೆಗೆ 3,158 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಮಿತಿ ತಿಳಿಸಿದೆ

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp