ಪತ್ನಿಗೆ ಕೋವಿಡ್-19 ಪರೀಕ್ಷೆ, ಮನೆಯಿಂದಲೇ ಕೆಲಸ ಮಾಡುವೆನೆಂದ ಕೆನಡಾ ಪ್ರಧಾನಿ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿ ಯಲ್ಲಿ ಜ್ವರ ತರಹದ ರೋಗಲಕ್ಷಣ ಕಾಣಿಸಿಕೊಂಡದ್ದರಿಂದ ತಾವಾಗಿಯೇ ಕರೋನ ಸೋಂಕಿನ ಪರೀಕ್ಷೆಗೆ ಒಳಗಾಗುವುದಾಗಿ ಹೇಳಿಕೊಂಡಿದ್ದಾರೆ 
ಪತ್ನಿಗೆ ಕೋವಿಡ್-19 ಪರೀಕ್ಷೆ, ಮನೆಯಿಂದಲೇ ಕೆಲಸ ಮಾಡುವೆನೆಂದ ಕೆನಡಾ ಪ್ರಧಾನಿ
ಪತ್ನಿಗೆ ಕೋವಿಡ್-19 ಪರೀಕ್ಷೆ, ಮನೆಯಿಂದಲೇ ಕೆಲಸ ಮಾಡುವೆನೆಂದ ಕೆನಡಾ ಪ್ರಧಾನಿ

ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು ಹೇಳಿದ ಟ್ವಿಟರ್

ಒಟ್ಟಾವ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಪತ್ನಿ ಯಲ್ಲಿ ಜ್ವರ ತರಹದ ರೋಗಲಕ್ಷಣ ಕಾಣಿಸಿಕೊಂಡದ್ದರಿಂದ ತಾವಾಗಿಯೇ ಕರೋನ ಸೋಂಕಿನ ಪರೀಕ್ಷೆಗೆ ಒಳಗಾಗುವುದಾಗಿ ಹೇಳಿಕೊಂಡಿದ್ದಾರೆ 


ಹೊಸ ಕರೋನವೈರಸ್ ಪರೀಕ್ಷೆಗೆ ಒಳಗಾಗುವುದಲ್ಲದೆ 14 ದಿನಗಳ ಕಾಲ ಸ್ವಯಂ-ನಿರ್ಬಂಧ , ಪ್ರತ್ಯೇಕತೆ ಹೊಂದಿ ಪರಸ್ಪರ ದೂರ ವಿರುವುದಾಗಿಯೂ ಪ್ರಕಟಿಸಿದ್ದಾರೆ.

ಅವರು ಬುಧವಾರ ಬ್ರಿಟನ್‌ನಿಂದ ಹಿಂತಿರುಗಿದಾಗಿನಿಂದ ಸೋಫಿ ಗ್ರೆಗೊಯಿರ್-ಟ್ರುಡೊ ಅವರಲ್ಲಿ ಜ್ವರದ ಲಕ್ಷಣಗಳು ಕಾಣಿಕೊಂಡಿವೆ. ಒಟ್ಟಾವಾದಲ್ಲಿ ಕೆನಡಾದ ಪ್ರಾಂತೀಯ ಮತ್ತು ಪ್ರಾದೇಶಿಕ ನಾಯಕರೊಂದಿಗಿನ ಸಭೆಯನ್ನು ಪ್ರಧಾನಿ ಟ್ರುಡೊ ರದ್ದುಗೊಳಿಸಿದ್ದಾರೆ.

ಮನೆಯಿಂದಲೇ ಕೆಲಸ ಮಾಡಿ ಎಂದ ಟ್ವಿಟರ್ 

ಮಾರಕ ಕೊರೋನಾ ಹರಡುವಿಕೆ ತಡೆಯಲು  ಸಹಾಯ ಮಾಡುವ ಪ್ರಯತ್ನದಲ್ಲಿ, ಟ್ವಿಟರ್ ತನ್ನ ಎಲ್ಲ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದೆ.

ಮಾರ್ಚ್ 1 ರಂದು, ಟ್ವಿಟರ್ ಬ್ಯುಸಿನೆಸ್ ಟ್ರಿಪ್, ಹಾಗೂ ದೂರ ದೇಶ ಪ್ರಯಾಣವನ್ನು ತನ್ನ ಉದ್ಯೋಗಿಗಳಿಗೆ ನಿರ್ಬಂಧಿಸಿತ್ತು.ಇದೀಗ ಸಂಸ್ಥೆ ತನ್ನ ಉದ್ಯೋಗಿಗಳೂ ಮನೆಯಿಂದಲೇ ಕೆಲಸ ಮಾಡಿರೆಂದು ಹೇಳಿದೆ.

ಮಾರ್ಚ್ 11 ರಂದು, ಕಂಪನಿಯು ದೇಶ ವಿದೇಶದಲ್ಲಿರುವ ತನ್ನೆಲ್ಲಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದನ್ನು ಕಡ್ಡಾಯ ಮಾಡಿದೆ. ಮನೆಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸುವುದರ ಹೊರತಾಗಿ, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳನ್ನು ತಡೆಯಲು ಟ್ವಿಟರ್ ತನ್ನ ಉದ್ಯೋಗಿಗಳು, ಗುತ್ತಿಗೆದಾರರು, ಮಾರಾಟಗಾರರು ಮತ್ತು ಇತರ ಸಿಬ್ಬಂದಿಗೆ ಹೆಚ್ಚುವರಿ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದೆ.

ಇನ್ನೊಂದೆಡೆ ಕೊರೋನಾವೈರಸ್ ಹಾವಳಿಯ ಕಾರಣ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷ ಕಾಲ ಮುಂದೂಡಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com