ಅಮೆರಿಕ ಸೇನೆಯಿಂದ ವುಹಾನ್ ಗೆ ಕೊರೋನಾ ವೈರಸ್ ಹರಡಿದೆ: ಚೀನಾ ಅಧಿಕಾರಿ

ಕೊರೋನಾ ವೈರಸ್ ಮಾಹಾಮಾರಿ ರೌದ್ರಾವತಾರದಿಂದ ಜಗತ್ತಿನಲ್ಲಿ ಚೀನಾ ತಲೆ ತಗ್ಗಿಸುವಂತಾಗಿತ್ತು. ಇದೀಗ ಕೊರೋನಾ ವೈರಸ್ ಅಮೆರಿಕ ಸೇನೆಯಿಂದ ವುಹಾನ್ ನಲ್ಲಿ ಹರಡಿರುವ ಸಾಧ್ಯತೆ ಇದೆ ಎಂದು ಚೀನಾದ ಉಪ ರಾಯಭಾರಿ ಆರೋಪಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಕೊರೋನಾ ವೈರಸ್ ಮಾಹಾಮಾರಿ ರೌದ್ರಾವತಾರದಿಂದ ಜಗತ್ತಿನಲ್ಲಿ ಚೀನಾ ತಲೆ ತಗ್ಗಿಸುವಂತಾಗಿತ್ತು. ಇದೀಗ ಕೊರೋನಾ ವೈರಸ್ ಅಮೆರಿಕ ಸೇನೆಯಿಂದ ವುಹಾನ್ ನಲ್ಲಿ ಹರಡಿರುವ ಸಾಧ್ಯತೆ ಇದೆ ಎಂದು ಚೀನಾದ ಉಪ ರಾಯಭಾರಿ ಆರೋಪಿಸಿದ್ದಾರೆ. 

ಪಾಕಿಸ್ತಾನದಲ್ಲಿ ಚೀನಾದ ಉಪ ರಾಯಭಾರಿಯಾಗಿದ್ದ ಲಿಜಿಯಾನ್ ಜಾವೊ ಟ್ವೀಟ್ ಮಾಡಿದ್ದು ಮಾರಕ ಕೊರೋನಾ ವೈರಸ್ ಅನ್ನು ಅಮೆರಿಕದ ಸೇನೆಯು ವುಹಾನ್ ಗೆ ತಂದಿರುವ ಸಾಧ್ಯತೆ ಇದೆ ಎಂದು ಟ್ವೀಟಿಸಿದ್ದಾರೆ. 

ಕೊರೋನಾ ವೈರಸ್ ನ ಮೂಲವನ್ನು ಪತ್ತೆ ಹಚ್ಚಲು ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ ಎಂದು ಜಾವೊ ಲಿಜಿಯಾನ್ ಟ್ವೀಟಿಸಿದ್ದು ಈ ಟ್ವೀಟ್ ನಿಂದ ಚೀನಾ ಅಂತರ ಕಾಯ್ದುಕೊಂಡಿದೆ. 

ಕೆಲ ಅಮೆರಿಕನ್ನರು ಜ್ವರದಿಂದ ಭಾದಿತರಾಗಿದ್ದಾರೆ ಎಂದು ತಪ್ಪಾಗಿ ರೋಗ ನಿರ್ಣಯ ಮಾಡಲಾಗಿದೆ. ಅವರಿಗೆ ಕೋವಿಡ್ 19 ಬಾಧಿಸಿರಬಹುದು ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬರ್ಟ್ ರೆಡ್ ಫೀಲ್ಡ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಜಾವೊ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com