ಕೊರೋನಾ ವೈರಸ್ ಚೀನಾಗೆ 'ಅಲ್ಲಾಹು' ಕೊಟ್ಟ ಶಿಕ್ಷೆ ಎಂದಿದ್ದ ಮುಸ್ಲಿಂ ವಿದ್ವಾಂಸಕನಿಗೂ ಸೋಂಕು, ವಿಡಿಯೋ!

ಕೊರೋನಾ ವೈರಸ್ ಮಹಾಮಾರಿ ದೇವರು ಚೀನಿಯರಿಗೆ ಕೊಟ್ಟ ಶಿಕ್ಷೆ ಎಂದು ಹೇಳಿದ್ದ ಇರಾಕ್ ನ ಇಸ್ಲಾಮಿಕ್ ವಿದ್ವಾಂಸನೂ ಇದೀಗ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ.
ಹದಿ ಅಲ್ ಮೊಡರೆಸಿ
ಹದಿ ಅಲ್ ಮೊಡರೆಸಿ

ಕೊರೋನಾ ವೈರಸ್ ಮಹಾಮಾರಿ ದೇವರು ಚೀನಿಯರಿಗೆ ಕೊಟ್ಟ ಶಿಕ್ಷೆ ಎಂದು ಹೇಳಿದ್ದ ಇರಾಕ್ ನ ಇಸ್ಲಾಮಿಕ್ ವಿದ್ವಾಂಸನೂ ಇದೀಗ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

ವಿದ್ವಾಂಸ ಹದಿ ಅಲ್ ಮೊಡರೆಸಿ ಫೆಬ್ರವರಿ 28ರಂದು ವಿಡಿಯೋ ಮಾಡಿದ್ದು ಕೊರೋನಾ ವೈರಸ್ ನ್ನು ಚೀನಾ ಜನತೆಗೆ ಅಲ್ಲಾಹ್ ನೀಡಿರುವ ಶಾಪ ಎಂದು ಹೇಳಿದ್ದರು. 20 ಮಿಲಿಯನ್ ಮುಸ್ಲಿಮರ ಜೀವನವನ್ನು ನಾಶ ಮಾಡಲು ಚೀನಾ ಯತ್ನಿಸಿದ್ದರು. ಮುಸ್ಲಿಮರನ್ನು ಬೆದರಿಸಿದ್ದರು. ಅವರ ಮಸೀದಿಗಳನ್ನು ಚೀನಾದಲ್ಲಿ ಹೊಡೆದುರುಳಿಸಲಾಗಿತ್ತು. ಪವಿತ್ರ ಗ್ರಂಥಗಳನ್ನು ಸುಟ್ಟಿದ್ದರು. ಮದ್ಯಪಾನ ಮಾಡುವುದಕ್ಕೆ ಒತ್ತಾಯಿಸಿದ್ದರು. ಯಾರೂ ತಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಭಾವಿಸಿದ್ದರು. ಆದರೆ ಸರ್ವಶಕ್ತನಾದ ಅಲ್ಲಾಹ್ ಶಿಕ್ಷೆ ಕೊಟ್ಟಿದ್ದಾನೆ ಎಂದು ಹದಿ ಅಲ್ ಹೇಳಿದ್ದರು. 

ಇಂದು ಅದೇ ಹದಿ ಅಲ್ ಮೊಡರೆಸಿ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ.

ಚೀನಾದಲ್ಲಿ ನರಮೇಧ ಸೃಷ್ಠಿಸಿದ್ದ ಕೊರೋನಾ ವೈರಸ್ ಇದೀಗ ಜಗತ್ತಿನಾದ್ಯಂತ ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿದ್ದು ಒಟ್ಟಾರೆ ವಿಶ್ವದಾದ್ಯಂತ 5000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com