ಜಾಗತಿಕ ಮಟ್ಟದ ಸಾಂಕ್ರಾಮಿಕ ಪಿಡುಗು 'ಕೊರೋನಾ': 6,400 ದಾಟಿದ ಮೃತರ ಸಂಖ್ಯೆ, 1,60,000 ಸೋಂಕಿತರು!

ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಗೆ ಇದುವರೆಗೆ ಬಲಿಯಾದವರ ಸಂಖ್ಯೆ 1 ಲಕ್ಷದ 63 ಸಾವಿರದ 930ಕ್ಕೇರಿದೆ.ವಿಶ್ವದ 141 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಒಟ್ಟಾರೆಯಾಗಿ ನಿನ್ನೆ ಒಂದೇ ದಿನ 6 ಸಾವಿರದ 420 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಾಗತಿಕ ಮಟ್ಟದ ಸಾಂಕ್ರಾಮಿಕ ಪಿಡುಗು 'ಕೊರೋನಾ': 6,400 ದಾಟಿದ ಮೃತರ ಸಂಖ್ಯೆ, 1,60,000 ಸೋಂಕಿತರು!

ಪ್ಯಾರಿಸ್:ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಗೆ ಇದುವರೆಗೆ ಬಲಿಯಾದವರ ಸಂಖ್ಯೆ 1 ಲಕ್ಷದ 63 ಸಾವಿರದ 930ಕ್ಕೇರಿದೆ.ವಿಶ್ವದ 141 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಒಟ್ಟಾರೆಯಾಗಿ ನಿನ್ನೆ ಒಂದೇ ದಿನ 6 ಸಾವಿರದ 420 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.


ಮೊನ್ನೆ ಶನಿವಾರ ರಾತ್ರಿ 11.30 ಮತ್ತು ನಿನ್ನೆ ರಾತ್ರಿ 1.30ರ ಮಧ್ಯೆ ಪ್ರಪಂಚದಲ್ಲಿ ಒಟ್ಟಾರೆ 653 ಕೊರೋನಾ ಸಾವು ಪ್ರಕರಣಗಳು ವರದಿಯಾಗಿದ್ದು 12 ಸಾವಿರದ 153 ಹೊಸ ಪ್ರಕರಣಗಳು ವರದಿಯಾಗಿವೆ.


ಇದು ಎಎಫ್ ಪಿ ಸುದ್ದಿಸಂಸ್ಥೆಯಿಂದ ಸಂಗ್ರಹಿಸಿದ ಅಂಕಿಅಂಶವಾಗಿದ್ದು ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ಸಂಗ್ರಹಿಸಲಾಗಿದೆ. ಹಾಂಕಾಂಗ್ ಮತ್ತು ಮಕಾವು ಹೊರತುಪಡಿಸಿ ಉಳಿದ ಪ್ರಾಂತ್ಯಗಳಲ್ಲಿ ಚೀನಾ ದೇಶದಲ್ಲಿ ಕಳೆದ ಡಿಸೆಂಬರ್ ನಲ್ಲಿ ಸೋಂಕು ತಗಲಿತ್ತು. ಇದುವರೆಗೆ ಚೀನಾದಲ್ಲಿ 80 ಸಾವಿರದ 844 ಪ್ರಕರಣಗಳು ವರದಿಯಾಗಿದೆ ಎಂದು ಘೋಷಿಸಿದೆ. ಅವುಗಳಲ್ಲಿ 3,199 ಸಾವು ಕಂಡಿದ್ದರೆ, 66 ಸಾವಿರದ 911 ಮಂದಿ ಗುಣಮುಖರಾಗುತ್ತಿದ್ದಾರೆ. ಮೊನ್ನೆ ಶನಿವಾರ ಮತ್ತು ನಿನ್ನೆ ಭಾನುವಾರದಲ್ಲಿ 20 ಹೊಸ ಪ್ರಕರಣಗಳು ಮತ್ತು 10 ಸಾವು ಚೀನಾ ದೇಶದಲ್ಲಿ ವರದಿಯಾಗಿದೆ.


ಚೀನಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ನಿನ್ನೆ 3 ಸಾವಿರದ 221 ಕೊರೋನಾ ಪೀಡಿತರ ಸಾವು ಕಳೆದೆರಡು ದಿನಗಳಲ್ಲಿ ಆಗಿದೆ. 83 ಸಾವಿರದ 94 ಮಂದಿಗೆ ಸೋಂಕು ತಗಲಿದ್ದು ಅವರಲ್ಲಿ 12 ಸಾವಿರದ 133 ಹೊಸ ಪ್ರಕರಣಗಳಾಗಿವೆ. ಚೀನಾದ ನಂತರ ಅತೀ  ಹೆಚ್ಚು ಕೊರೋನಾ ಪೀಡಿತ ರಾಷ್ಟ್ರ ಇಟಲಿಯಾಗಿದೆ. ಇಲ್ಲಿ ಇದುವರೆಗೆ ಸಾವಿರದ 809 ಮಂದಿ ಮೃತಪಟ್ಟಿದ್ದು 24 ಸಾವಿರದ 747 ಸೋಂಕು ಕೇಸುಗಳು ವರದಿಯಾಗಿವೆ. ಇರಾನ್ ನಲ್ಲಿ 724 ಮಂದಿ ಮೃತಪಟ್ಟರೆ 13 ಸಾವಿರದ 938 ಮಂದಿಗೆ ಸೋಂಕು ತಗಲಿದೆ. ಸ್ಪೈನ್ ನಲ್ಲಿ 288 ಸಾವು ಮತ್ತು 7 ಸಾವಿರದ 753 ಪ್ರಕರಣಗಳು, ಫ್ರಾನ್ಸ್ ನಲ್ಲಿ 91 ಮಂದಿ ಮೃತಪಟ್ಟು 4 ಸಾವಿರದ 499 ಮಂದಿಗೆ ಸೋಂಕು ತಗಲಿದೆ.


ಕಳೆದ ಶನಿವಾರದ ನಂತರ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಸೀಶೆಲ್ಸ್, ಕಾಂಗೋ ಗಣರಾಜ್ಯ ಮತ್ತು ಉಜ್ಬೇಕಿಸ್ತಾನ್ ಗಳಲ್ಲಿ ಮೊದಲ ಕೇಸು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com