ಪ್ಯಾರಾಸೆಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ 'ಕೊರೋನಾ' ಗೆದ್ದುಬಂದ ಬ್ರಿಟಿಷ್ ವೈದ್ಯೆ!

ಪ್ಯಾರಾಸೆಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸುವ ಮೂಲಕ ನಾನು ಮರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖಳಾದೆ ಎಂದು ಬ್ರಿಟನ್ ನ ಹಿರಿಯ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.
ಕ್ಲೇರಾ ಗೆರಡಾ (ಎಡಗಡೆ ಇರುವವರು)
ಕ್ಲೇರಾ ಗೆರಡಾ (ಎಡಗಡೆ ಇರುವವರು)

ಲಂಡನ್: ಪ್ಯಾರಾಸೆಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸುವ ಮೂಲಕ ನಾನು ಮರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖಳಾದೆ ಎಂದು ಬ್ರಿಟನ್ ನ ಹಿರಿಯ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.

60 ವರ್ಷದ ಕ್ಲೇರಾ ಗೆರಡಾ ಅವರು ಲಂಡನ್ ಮೂಲದ ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿದ್ದು, ಇತ್ತೀಚಿಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ತೆರಳಿದ್ದಾಗ ಅವರಿಗೆ ಕೊರೋನಾ ವೈರಸ್ ತಗುಲಿತ್ತು. ಕೊರೋನಾದಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ಪ್ಯಾರಾಸೆಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸುವ ಮೂಲಕ ಗುಣಮುಖರಾಗಿದ್ದಾರೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ.

ಈ ವೈದ್ಯೆ ನ್ಯೂಯಾರ್ಕ್ ನಿಂದ ಮರಳಿದ ನಂತರ ಜ್ವರ, ಚಳಿ, ಗಂಟಲು ನೋವು, ತಲೆತಿರುಗುವಿಕೆ, ಕೀಲು ನೋವು, ತಲೆನೋವು ಮತ್ತು ನಿರಂತರ ಕೆಮ್ಮು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿತ್ತು.

'ನಾನು ಸಂಪೂರ್ಣ ನಿಶಕ್ತಳಾಗಿದ್ದೆ. ನನಗೆ 50 ಪೌಂಡ್ ಬಾರ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಆರೋಗ್ಯ ತುಂಬಾ ಕ್ಷೀಣಿಸಿತು. ಆದರೂ ನನ್ನ ಜೀವಕ್ಕೆ ಅಪಾಯವಿದೆ ಎಂದು ನಾನು ಭಾವಿಸಲಿಲ್ಲ. ನನ್ನ ದೇಹವು ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ನಾನು ಏನು ಮಾಡಬಹುದೆಂದು ಯೋಚಿಸಿದೆ. ಬಳಿಕ ಪ್ಯಾರಾಸೆಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿದೆ ಎಂದು ಕ್ಲೇರಾ ಅವರು ಪಲ್ಸ್ ಮಾಸಿಕ ಪತ್ರಿಕೆಗೆ ತಿಳಿಸಿದ್ದಾರೆ.

ಕೊರೋನಾ ವೈರಸ್ ಬಗ್ಗೆ ಜನ ಏಕೆ ಚಿಂತೆ ಮಾಡುತ್ತಿದ್ದಾರೆಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಬಹುಸಂಖ್ಯಾತರು ನನ್ನಂತೆಯೇ ಬದುಕುಳಿಯುತ್ತಾರೆ. ಇದು ಮಾರಣಾಂತಿಕ ಕಾಯಿಲೆ ಅಲ್ಲಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com