ವಿಶ್ವದಾದ್ಯಂತ ವ್ಯಾಪಕವಾದ ಕೊರೋನಾ: ವೈರಸ್'ಗೆ 7000 ಮಂದಿ ಬಲಿ, 1,75,500ಕ್ಕೇರಿದ ಸೋಂಕಿತರ ಸಂಖ್ಯೆ

ವಿಶ್ವದಾದ್ಯಂತ ಕೊರೋನಾ ವೈರಸ್'ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂದ ಒಟ್ಟು 7,000 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,75,500ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರಿಸ್: ವಿಶ್ವದಾದ್ಯಂತ ಕೊರೋನಾ ವೈರಸ್'ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂದ ಒಟ್ಟು 7,000 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,75,500ಕ್ಕೆ ಏರಿಕೆಯಾಗಿದೆ. 

ವಿಶ್ವದ 145 ದೇಶಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಸೋಮವಾರ ಒಂದೇ ದಿನದಲ್ಲಿ 11,597 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 

ಕೊರೋನಾ ಪೀಡಿತ ರಾಷ್ಟ್ರ ಚೀನಾ ಒಂದೇ ರಾಷ್ಟ್ರದಲ್ಲಿ 3,213 ಮಂದಿ ಸಾವನ್ನಪ್ಪಿದ್ದು, ಸೋಂಕು ಪೀಡಿದ ಲಕ್ಷಾಂತರ ಮಂದಿಯಲ್ಲಿ 67,490 ಮಂದಿ ಇದೀಗ ವೈರಸ್ ನಿಂದ ಗುಣಮುಖರಾಗಿದ್ದಾರೆ. 

ಇಟಲಿ ರಾಷ್ಟ್ರದಲ್ಲಿ 2,158 ಮಂದಿ ಸಾವನ್ನಪ್ಪಿದ್ದರೆ, ಇರಾನ್ ರಾಷ್ಟ್ರದಲ್ಲಿ 853, ಸ್ಪೇನ್ 309, ಫ್ರಾನ್ಸ್ 127 ಮಂದಿ ಸಾವನ್ನಪ್ಪಿದ್ದಾರೆ. 

ಏಷ್ಯಾದಲ್ಲಿ 3,337, ಯೂರೋಪ್ 2,711, ಮಿಡ್ಲ್ ಈಸ್ಟ್ 869, ಅಮೆರಿಕಾ ಹಾಗೂ ಕೆನಡಾದಲ್ಲಿ 70, ಲ್ಯಾಟಿನ್ ಅಮೆರಿಗಾ ಹಾಗೂ ಕೆರಿಬಿಯನ್ 7 ಮಂದಿ, ಆಫ್ರಿಕಾ 8 ಮತ್ತು ಓಷಿಯಾನಿಯಾ 5 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ಸೋಂಕಿತ ಸಂಖ್ಯೆ ಕೂಡ ಹೆಚ್ಚಾಗಿದ್ದು, ಇದೀಗ ವಿಶ್ವ ವೈರಾಣು ವಿರುದ್ಧ ಹೋರಾಡಲು ಹೆಣಗಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com