ಕೊರೋನಾ ವೈರಸ್ ಗೆ ಪಾಕಿಸ್ತಾನದಲ್ಲಿ ಮೊದಲ ಬಲಿ, ಸೋಂಕಿತರ ಸಂಖ್ಯೆ 193

ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್(ಕೋವಿಡ್ -೧೯) ನೆರೆಯ ಪಾಕಿಸ್ತಾನಕ್ಕೂ ಭೀತಿ ಸೃಷ್ಟಿಸಿದ್ದು, ಪಾಕಿಸ್ತಾನದಲ್ಲಿ ಮೊದಲ “ಕೊರೋನಾ” ಸಾವು ಪ್ರಕರಣ ಮಂಗಳವಾರ ದಾಖಲಾಗಿದೆ.
ಪಾಕಿಸ್ತಾನ
ಪಾಕಿಸ್ತಾನ

ಇಸ್ಲಾಮಾಬಾದ್: ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್(ಕೋವಿಡ್ -೧೯) ನೆರೆಯ ಪಾಕಿಸ್ತಾನಕ್ಕೂ ಭೀತಿ ಸೃಷ್ಟಿಸಿದ್ದು, ಪಾಕಿಸ್ತಾನದಲ್ಲಿ ಮೊದಲ “ಕೊರೋನಾ” ಸಾವು ಪ್ರಕರಣ ಮಂಗಳವಾರ ದಾಖಲಾಗಿದೆ.

ಕೋವಿಡ್ -೧೯ ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಪ್ರಕಟಿಸಿದೆ.

ಹಫೀಜಾಬಾದ್ ಮೂಲದ ಈ ವ್ಯಕ್ತಿ ಇತ್ತೀಚೆಗೆ ಇರಾನ್‌ನಿಂದ ಸ್ವದೇಶಕ್ಕೆ ಮರಳಿದ್ದರು. ಕರೋನಾ ರೋಗ ಲಕ್ಷಣಗಳಿದ್ದ ಕಾರಣ, ಆತನನ್ನು ಇರಾನ್-ತಫ್ತಾನ್ ಗಡಿಯಲ್ಲಿ ಎರಡು ವಾರಗಳ ಕಾಲ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕಲ್ಪಿಸಲಾಗಿತ್ತು. ಆದರೆ, ಆತನ ಆರೋಗ್ಯ ಹದಗೆಟ್ಟಿ ಕಾರಣ ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು. ಲಾಹೋರ್‌ನ ಮಾಯೊ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾಗ ವ್ಯಕ್ತಿ ಮೃತಪಟ್ಟಿದ್ದಾರೆ.

ಈ ಮಧ್ಯೆ ಪಾಕಿಸ್ತಾನದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 193ಕ್ಕೆ ಏರಿದೆ. ವಿಶ್ವಾದ್ಯಂತ ೭,೦೦೦ ಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com