ಟಿಕ್ ಟಾಕ್ ವಿಡಿಯೋ ‘ಕೊರೋನಾ ವೈರಸ್ ಚಾಲೆಂಜ್’ ವಿಮಾನದ ಶೌಚಾಲಯವನ್ನು ನೆಕ್ಕಿದ ಮಾಡೆಲ್, ನೆಟಿಗರು ಗರಂ!

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡೆಲ್ ಒಬ್ಬಳು ಟಿಕ್ ಟಾಕ್ ನಲ್ಲಿ ಕೊರೋನಾ ವೈರಸ್ ಚಾಲೆಂಜ್ ಹೆಸರಿನಲ್ಲಿ ವಿಮಾನದ ಶೌಚಾಲಯವನ್ನು ನೆಕ್ಕಿದ್ದ ವಿಡಿಯೋವನ್ನು ಹರಿಬಿಟ್ಟಿದ್ದು ಇದಕ್ಕೆ ನೆಟಿಗರು ಗರಂ ಆಗಿದ್ದಾರೆ. 

Published: 17th March 2020 06:29 PM  |   Last Updated: 17th March 2020 06:29 PM   |  A+A-


Model

ಮಾಡೆಲ್

Posted By : Vishwanath S
Source : Online Desk

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡೆಲ್ ಒಬ್ಬಳು ಟಿಕ್ ಟಾಕ್ ನಲ್ಲಿ ಕೊರೋನಾ ವೈರಸ್ ಚಾಲೆಂಜ್ ಹೆಸರಿನಲ್ಲಿ ವಿಮಾನದ ಶೌಚಾಲಯವನ್ನು ನೆಕ್ಕಿದ್ದ ವಿಡಿಯೋವನ್ನು ಹರಿಬಿಟ್ಟಿದ್ದು ಇದಕ್ಕೆ ನೆಟಿಗರು ಗರಂ ಆಗಿದ್ದಾರೆ. 

21 ವರ್ಷದ ಮಾಡೆಲ್ ಅವಾ ಲೌಸಿ ಎಂಬಾಕೆ ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಅದರ ಕೆಳಗೆ ದಯವಿಟ್ಟು ಇದನ್ನು ತಿಳಿದುಕೊಳ್ಳಿ. ವಿಮಾನದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ ಎಂದು ಬರೆದಿದ್ದರು. ಇದನ್ನು ನೋಡಿದ ಅನುಯಾಯಿಗಳು ಆಕೆಯ ವಿರುದ್ಧ ಗರಂ ಆಗಿದ್ದು ನಂತರ ಮಾಡೆಲ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾಳೆ. 

ಇನ್ಸ್ಟಾಗ್ರಾಂನಲ್ಲಿ 1,60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅವಾ ಲೌಸಿ ಈ ಹಿಂದೆ ಹಲವು ಟೆಲಿವಿಷನ್ ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾಂಕ್ರಾಮಿಕ ರೋಗದ ಬಗೆಗಿನ ಭಯವನ್ನು ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳಲು ಬಳಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಲೆ ಮಾಡೆಲ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾಳೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp