ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ 85 ಸಾವು: ದೇಶವಾಸಿಗಳು ಮನೆಯಲ್ಲಿಯೇ ಇರಿ- ಮೆಲಾನಿಯಾ ಟ್ರಂಪ್

ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.
ಮೆಲಾನಿಯಾ ಟ್ರಂಪ್
ಮೆಲಾನಿಯಾ ಟ್ರಂಪ್

ವಾಷಿಂಗ್ಟನ್: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.

ಇಮೇಲ್ ಅಥವಾ ಫೇಸ್‌ಟೈಮ್  ಮೂಲಕ ನಿಮ್ಮ ಪ್ರೀತಿಪಾತ್ರರೊಡನೆ ಸಂಪರ್ಕ ಸಾಧಿಸಲು ಮನೆಯಿಂದಲೇ ಕೆಲಸ ಮಾಡುವ ಸಮಯದ ಲಾಭವನ್ನು ಪಡೆದುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ, ಅಥವಾ ಪುಸ್ತಕವನ್ನು ಓದುವ ಮೂಲಕ ಅಥವಾ ಹವ್ಯಾಸದಲ್ಲಿ ಸಮಯ ಕಳೆಯುವ ಮೂಲಕ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಿ ಎಂದು ಮೆಲಾನಿಯಾ ಟ್ರಂಪ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

85 ಜನರು ಸಾವನ್ನಪ್ಪಿರುವುದು ಮಾತ್ರವಲ್ಲದೇ, ಸುಮಾರು 4500 ಅಮೆರಿಕಾದ ಜನರು ಕೊರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸಾಮೂಹಿಕವಾಗಿ ಸೇರುವುದು, 10ಕ್ಕೂ ಹೆಚ್ಚು  ಜನರು ಗುಂಪು ಸೇರುವುದನ್ನು ತಡೆಗಟ್ಟಿ ಎಂದು ಶ್ವೇತಭವನ  ಸಲಹೆ ನೀಡಿದೆ. 

ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೊರೋನಾವೈರಸ್  7100 ಜನರನ್ನು ಬಲಿಪಡೆದುಕೊಂಡಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ವಾರದ ಆರಂಭದಿಂದಲೂ  ಸಾವಿರಾರು ಅಮೆರಿಕದವರು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕೆಲಸದ ಮಧ್ಯೆಯೂ ಪ್ರತ್ಯೇಕವಾಗಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. 

ಅಮೆರಿಕಾದಲ್ಲಿಯೂ ಶಾಲಾ, ಕಾಲೇಜುಗಳು, ಹೋಟೆಲ್, ರೆಸ್ಟೋರೆಂಟ್ ಗಳು ಮುಚ್ಚಲ್ಪಟ್ಟಿದ್ದು, ಕ್ರೀಡಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com