ಅಮೆರಿಕದಲ್ಲಿ ಎಲ್ಲ 50 ರಾಜ್ಯಗಳಿಗೆ ವ್ಯಾಪಿಸಿದ ಕೊವಿದ್-19: ಒಟ್ಟು ಸಾವಿನ ಸಂಖ್ಯೆ 112ಕ್ಕೆ ಏರಿಕೆ

ಅಮೆರಿಕದಲ್ಲಿ ಕರೋನ ಸೋಂಕಿನಿಂದ ಮೃತಟ್ಟವರ ಸಂಖ್ಯೆ 105 ಕ್ಕೆ ತಲುಪುತ್ತಿದ್ದಂತೆ ಮಾರಣಾಂತಿಕ ಕರೋನವೈರಸ್ ಈಗ ದೇಶದ ಎಲ್ಲ 50 ರಾಜ್ಯಗಳನ್ನೂ ಬಿಡದೆ ಆಕ್ರಮಿಸಿಕೊಂಡಿದೆ. 
ಅಮೆರಿಕದ 50 ರಾಜ್ಯಗಳಿಗೂ ಹಬ್ಬಿದ ಕರೋನ ಸೋಂಕು
ಅಮೆರಿಕದ 50 ರಾಜ್ಯಗಳಿಗೂ ಹಬ್ಬಿದ ಕರೋನ ಸೋಂಕು

ವಾಷಿಂಗ್ಟನ್: ಮಾರಕ ಕೊರೊನವೈರಸ್ ಸೋಂಕು ಇದೀಗ ಅಮೆರಿಕದ 50 ರಾಜ್ಯಗಳಿಗೆ ವ್ಯಾಪಿಸಿದ್ದು, ಸಾವಿನ ಸಂಖ್ಯೆ 112 ಕ್ಕೆ ಏರಿದೆ. ಅಮೆರಿಕದಲ್ಲಿ ಪಶ್ಚಿಮ ವರ್ಜೀನಿಯಾ ಸೋಂಕು ಹರಡಿದ 50ನೇ ದೇಶವಾಗಿದ್ದು, ಬುಧವಾರ ಇಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ.

ರಾಜ್ಯದ ಪೂರ್ವ ಪ್ರಾಂತ್ಯದಿಂದ ಮೊದಲ ಪ್ರಕರಣ ವರದಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ ಪಶ್ಚಿಮ ವರ್ಜೀನಿಯಾ ಗವರ್ನರ್ ಜಿಮ್ ಜಸ್ಟೀಸ್ ಅವರು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಮಾರಣಾಂತಿಕ ವೈರಾಣುವಿನಿಂದ ಮೃತಪಟ್ಟ ಪ್ರಕರಣಗಳ ಪೈಕಿ ಇಲಿನಿಯೋಸ್ 18 ರಾಜ್ಯವೆನಿಸಿದೆ. ಮಂಗಳವಾರ ರಾಜ್ಯದಲ್ಲಿ ಸೋಂಕಿನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರವನ್ನು ಸಂಪೂರ್ಣ ಬಂದ್ ಮಾಡಲು ಉದ್ದೇಶಿಸಿರುವುದಾಗಿ ಅಲ್ಲಿನ ಮೇಯರ್ ಬಿಲ್ ಡೆ ಬ್ಲಾಸಿಯೋ ತಿಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ನಲ್ಲೂ ಇಂತಹುದೇ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜನರನ್ನು ಮನೆಗಳಲ್ಲೇ ಉಳಿಯುವಂತೆ ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹೊರ ಬರುವಂತೆ ಸೂಚಿಸಲಾಗಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋನ ಸುಮಾರು 67 ಲಕ್ಷ ಜನರು ಮನೆಗಳಲ್ಲೇ ಉಳಿದಿದ್ದಾರೆ. ಇಡೀ ಅಮೆರಿಕದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 108ಕ್ಕೇರಿದ್ದು, ದೇಶಾದ್ಯಂತ 6,300 ಪ್ರಕರಣಗಳು ದೃಢಪಟ್ಟಿವೆ. ವಿಶ್ವದಾದ್ಯಂತ ಸುಮಾರು 8,000 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಎರಡು ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com