ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆ

ಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. 

ಸೋಮವಾರ ಹೊಸದಾಗಿ ಒಂದೇ ಒಂದು ಪ್ರಕರಣ ಮಾತ್ರವೇ ದಾಖಲಾಗಿದೆ. ಇದೇ ವೇಳೆ ಚೀನಾದಲ್ಲೆಡೆ ಹೊಸದಾಗಿ 13 ಪ್ರಕರಣಗಳು ದೃಢಪಟ್ಟಿದ್ದು, 13 ಮಂದಿ ಸೋಮವಾರ ಕೊರೋನಾಗೆ ಬಲಿಯಾಗಿದ್ದಾರೆ. ಇದೂವರೆಗೆ ಒಟ್ಟು 3,226 ಮಂದಿ ಸಾವಿಗೀಡಾಗಿದ್ದಾರೆ. 

ಕೊರೋನಾದ ಕೇಂದ್ರವಾಗಿದ್ದ ವುಹಾನ್ ಮತ್ತು ಹುಬೇ ಪ್ರಾಂತ್ಯದಲ್ಲಿ ಸುಮಾರು 5 ಕೋಟಿ ಜನಸಂಖ್ಯೆ ಿದೆ. ಕೊರೋನಾ ವೈರಸ್ ಪತ್ತೆಯಾದ ಬಳಿಕ ಈ ಎರಡು ನಗರಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲಾಗಿತ್ತು. ಈ ಎರಡು ಪ್ರಾಂತ್ಯಗಳಲ್ಲಿ ಒಟ್ಟು 67,799 ಮಂದಿಗೆ ಕೊರೋನಾ ಸೋಂಕು ತಗುಲಿದೆ. 2,243 ಜನರ ಸ್ಥಿತಿ ಗಂಭೀರವಾಗಿದೆ. ಉಳಿದ 539 ಜನರ ಸ್ಥಿತಿ ತೀರಾ ಗಂಭೀರವಾಗಿದೆ. 

ವೈರಸ್ ತಹಬದಿಗೆ ಬಂದ ಹಿನ್ನೆಲೆ ಚೀನಾ ವೈದ್ಯಕೀಯ ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸುತ್ತಿದೆ. ಕೊರೋನಾ ತಡೆಗಾಗಿಯೇ ವುಹಾನ್ ನಲ್ಲಿ ಚೀನಾ 14 ತಾತ್ಕಾಲಿಕ ಆಸ್ಪತ್ರೆಗಳನ್ನು  ನಿರ್ಮಾಣ ಮಾಡಿತ್ತು. ಅಲ್ಲದೆ, ಈ ಅಸ್ಪತ್ರೆಗಳಲ್ಲಿ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ದೇಶದ ವಿವಿಧ ಭಾಗಗಳಿಂದ 41 ವೈದ್ಯಕೀಯ ತಂಡಗಳ 3600 ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com