ದಾಂಪತ್ಯಕ್ಕೂ ಭಂಗ ತಂದ ಕೊರೋನಾ: ಮನೆಯಲ್ಲೇ ಇರುವ ದಂಪತಿಗಳ ನಡುವೆ ಕಿತ್ತಾಟ, ಚೀನಾದಲ್ಲಿ ಡಿವೋರ್ಸ್ ಸಂಖ್ಯೆ ಹೆಚ್ಚಳ!

ಇಷ್ಟು ಕೇವಲ ಮನುಷ್ಯನ ಜೀವವನ್ನೂ ಮಾತ್ರ ತೆಗೆದುಕೊಳ್ಳುತ್ತಿದ್ದ ಕೊರೋನಾ ಇದೀಗ ದಂಪತಿಗಳ ದಾಂಪತ್ಯ ಜೀವನಕ್ಕೂ ಭಂಗ ತಂದಿದೆ. ವೈರಸ್ ಪರಿಣಾಮ ಮನೆಗಳಲ್ಲಿಯೇ ಇರುತ್ತಿರುವ ದಂಪತಿಗಳಲ್ಲಿ ಕಿತ್ತಾಟ ಹೆಚ್ಚಾಗುತ್ತಿದ್ದು, ಪರಿಣಾಮ ಚೀನಾದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಇಷ್ಟು ಕೇವಲ ಮನುಷ್ಯನ ಜೀವವನ್ನೂ ಮಾತ್ರ ತೆಗೆದುಕೊಳ್ಳುತ್ತಿದ್ದ ಕೊರೋನಾ ಇದೀಗ ದಂಪತಿಗಳ ದಾಂಪತ್ಯ ಜೀವನಕ್ಕೂ ಭಂಗ ತಂದಿದೆ. ವೈರಸ್ ಪರಿಣಾಮ ಮನೆಗಳಲ್ಲಿಯೇ ಇರುತ್ತಿರುವ ದಂಪತಿಗಳಲ್ಲಿ ಕಿತ್ತಾಟ ಹೆಚ್ಚಾಗುತ್ತಿದ್ದು, ಪರಿಣಾಮ ಚೀನಾದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. 

ಕೊರೋನಾದಿಂದಾದಿ ಯಾರೂ ಮನೆ ಬಿಟ್ಟು ಹೊರಬರಬಾರದು. ರೋಗ ಹರಡುವಿಕೆ ತಡೆಗೆ ಇದು ಅಗತ್ಯ ಎಂದು ಈ ಹಿಂದೆ ಚೀನಾ ಸರ್ಕಾರ ಆದೇಶ ಹೊರಡಿಸಿತ್ತು. ಈ ಪ್ರಕಾರ ಜನರು ಮನೆಗಳಿಂದ ಹಲವು ದಿನಗಳ ಕಾಲ ಹೊರಬರುತ್ತಿಲ್ಲ. ಈ ವೇಳೆ ಮನೆಯಲ್ಲಿಯೇ ಇದ್ದೂ ಇದ್ದೂ ಅನೇಕರು ಬೇಸತ್ತು ಹೋಗಿದ್ದಾರೆ. 

ಮೊದಲೇ ಅಷ್ಟಕ್ಕಷ್ಟೇ ಸಂಬಂಧ ಹೊಂದಿದ್ದ ಪತಿ-ಪತ್ನಿಯರ ನಡುವೆ ಕೂಡ ಜಗಳ ಹೆಚ್ಚಾಗಿದೆ. ಇವು ವಿಚ್ಛೇದನದ ಘಟ್ಟವನ್ನೂ ಈಗ ತಲುಪಿವೆ ಎಂದು ಸರ್ಕಾರದ ವಿವಾಹ ನೋಂದಣಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡುತ್ತಿವೆ. 

ಈ ಮೊದಲಿಗಿಂತ ಹೆಚ್ಚಿನ ವಿಚ್ಛೇದನಗಳು ಈಗ ನಡೆದಿವೆ ಎಂದು ಸಿಚುವಾನ್ ಪ್ರಾಂತ್ಯದ ಡಾಝೌ ಮದುವೆ ನೋಂದಣಾಧಿಕಾರಿ ಲು ಶಿಜುನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com