ಕೊರೊನವೈರಸ್‍: ಸ್ಪೇನ್‍ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆ

ಸ್ಪೇನ್‍ನಲ್ಲಿ ಕಳೆದ 24 ಗಂಟೆಗಳಲ್ಲಿ 462 ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಮಾರಕ ಕೊವಿದ್‍-19 ಸೋಂಕಿನಿಂದ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,182ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಕೊರೊನವೈರಸ್‍: ಸ್ಪೇನ್‍ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆ
ಕೊರೊನವೈರಸ್‍: ಸ್ಪೇನ್‍ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆ

ಮ್ಯಾಡ್ರಿಡ್: ಸ್ಪೇನ್‍ನಲ್ಲಿ ಕಳೆದ 24 ಗಂಟೆಗಳಲ್ಲಿ 462 ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಮಾರಕ ಕೊವಿದ್‍-19 ಸೋಂಕಿನಿಂದ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,182ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಆಗ್ನೇಯ ಐರೋಪ್ಯ ರಾಷ್ಟ್ರವಾದ ಸ್ಪೇನ್‍, ಕೊರೊನ್‍ ವೈರಸ್‍ನಿಂದ ವಿಶ್ವದಲ್ಲೇ ಅತಿಹೆಚ್ಚು ಬಾಧಿತ ದೇಶಗಳ ಪೈಕಿ ನಾಲ್ಕನೇ ದೇಶವಾಗಿದೆ. ಇಲ್ಲಿ ಸೋಂಕಿತ ಜನರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧ ಮತ್ತು ಇತರ ವೈದ್ಯಕೀಯ ಸಂಪನ್ಮೂಲಗಳನ್ನು ತರೆಸಿಕೊಳ್ಳಲು ಹೊರಾಡುತ್ತಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಪ್ರತಿಯೊಬ್ಬರಿಗೆ ಔಷಧ ಪೂರೈಸುವಲ್ಲೂ ವಿಫಲವಾಗಿದೆ.  ನೆರೆಯ ಇಟಲಿ ಸದ್ಯ, ಯುರೋಪ್‍ ನಲ್ಲಿ ಸೋಂಕಿನ ಕೇಂದ್ರಬಿಂದುವಾಗಿದ್ದು ಇಲ್ಲಿ 5,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 60,000 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com