ಮೊದಲ 1 ಲಕ್ಷ ಸೋಂಕು ಹರಡಲು 67 ದಿನಗಳು ಬೇಕು, 3ನೇ 1 ಲಕ್ಷ ಜನಕ್ಕೆ ಸೋಂಕು ಹರಡಲು ನಾಲ್ಕೇ ದಿನ ಸಾಕು! 

ಕಿಲ್ಲರ್ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಇದರ ತೀವ್ರತೆ ಕ್ರಮೇಣ ಅನುಭವಕ್ಕೆ ಬರುತ್ತಿದ್ದು ವಿಶ್ವಸಂಸ್ಥೆ ಈ ಬಗ್ಗೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ. 
ಕೊರೋನ
ಕೊರೋನ

ನವದೆಹಲಿ: ಕಿಲ್ಲರ್ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಇದರ ತೀವ್ರತೆ ಕ್ರಮೇಣ ಅನುಭವಕ್ಕೆ ಬರುತ್ತಿದ್ದು ವಿಶ್ವಸಂಸ್ಥೆ ಈ ಬಗ್ಗೆ ನಿರಂತರ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದೆ. 

ಕೊರೋನಾ ವೈರಾಣು ಹರಡುತ್ತಿರುವ ಪ್ರಮಾಣದ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಕೊರೋನಾ ಮಹಾಮಾರಿಗೆ ಜೀವ ಕಳೆದುಕೊಂಡಿರುವವರ ಸಂಖ್ಯೆ 16,000 ಆಗಿದ್ದು 3.78 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. 

ಈಗಲೂ ಸಹ ಕೊರೋನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಬಹುದೆಂದು ಅಭಿಪ್ರಾಯಪಟ್ಟಿರುವ ವಿಶ್ವಸಂಸ್ಥೆ, ಕೆಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದೆ. 

ಕೊರೋನಾ ವೈರಾಣು ಸೋಂಕು ಮೊದಲೇ ಹೇಳಿದಂತೆ ಕ್ರಮೇಣ ವೇಗವಾಗಿ ಹರಡುವ ಸೋಂಕಾಗಿದ್ದು, ಮೊದಲ 1 ಲಕ್ಷ ಸೋಂಕು ತಗುಲುವುದಕ್ಕೆ ಬರೊಬ್ಬರಿ 67 ದಿನಗಳು ತೆಗೆದುಕೊಳ್ಳುತ್ತದೆ. ಆದರೆ ಕ್ರಮೇಣ ವೇಗವಾಗಿ ಹರಡಲಿದ್ದು 3 ನೇ 1 ಲಕ್ಷ ತಲುಪುವುದಕ್ಕೆ ಕೇವಲ 4 ದಿನಗಳು ಸಾಕೆಂಬ ಆಘಾತಕಾರಿ ಅಂಶ ವಿಶ್ವಸಂಸ್ಥೆಯಿಂದ ಹೊರಬಿದ್ದಿದೆ. 

2 ನೇ 1ಲಕ್ಷ ಜನರಿಗೆ ಸೋಂಕು ತಗುಲುವುದಕ್ಕೆ 11 ದಿನಗಳು ಅಗತ್ಯವಿದ್ದು, 3 ನೇ 1 ಲಕ್ಷ ಜನರಿಗೆ ಸೋಂಕು ತಗುಲಲು ಕೇವಲ 4 ದಿನಗಳು ಸಾಕು ಆದರೆ ಧೃತಿಗೆಡುವ ಅಗತ್ಯವಿಲ್ಲ ಈಗಲೂ ಪರಿಸ್ಥಿತಿ ಬದಲಾವಣೆ ಮಾಡಲು ಸಾಧ್ಯವಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com