ಕೋವಿಡ್-19: ವಿಶ್ವದಾದ್ಯಂತ ಆರ್ಥಿಕ ಸುನಾಮಿ,ಮಿಲಿಯನ್ ಗಟ್ಟಲೇ ಉದ್ಯೋಗ ನಷ್ಟ- ಮೂಡಿ ಎಚ್ಚರಿಕೆ

ಮನುಕುಲಕ್ಕೆ ಸಂಕಷ್ಟವನ್ನುಂಟುಮಾಡುತ್ತಿರುವ ಕೋವಿಡ್-19 ವಿಶ್ವದಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸುತ್ತಿದ್ದು,ಮುಂದಿನ ವಾರಗಳಲ್ಲಿ ಮಿಲಿಯನ್ ಗಟ್ಟಲೇ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಮನುಕುಲಕ್ಕೆ ಸಂಕಷ್ಟವನ್ನುಂಟುಮಾಡುತ್ತಿರುವ ಕೋವಿಡ್-19 ವಿಶ್ವದಾದ್ಯಂತ ಆರ್ಥಿಕ ಸುನಾಮಿಯನ್ನು ಸೃಷ್ಟಿಸುತ್ತಿದ್ದು,ಮುಂದಿನ ವಾರಗಳಲ್ಲಿ ಮಿಲಿಯನ್ ಗಟ್ಟಲೇ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ಅಂದು ದುಡಿದು ಊಟ ಮಾಡುತ್ತಿದ್ದ ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಮೂಡಿ ವಿಶ್ಲೇಷಿಸಿದೆ.

ಕೊರೋನಾವೈರಸ್ ಯುರೋಪಿಯನ್, ಅಮೆರಿಕಾ ಹಾಗೂ ಏಷ್ಯಾದ ವಿವಿಧೆಡೆಯ ಆರ್ಥಿಕತೆ ಮೇಲೆ ಮಹತ್ವದ ಹಾನಿ ಉಂಟು ಮಾಡಿದ್ದು, ಎಲ್ಲವೂ ಸ್ಥಗಿತಗೊಂಡಿದೆ. ಹೂಡಿಕೆ ವ್ಯವಹಾರದಲ್ಲಿ ಮೊಟಕು, ಆರ್ಥಿಕ ಕುಸಿತದಿಂದಾಗಿ ಹಣಕಾಸಿನ ತೊಂದರೆ ಕ್ಷಿಪ್ರಗತಿಯಲ್ಲಿ ಬಂದಿದೆ ಎಂದು ಮೂಡಿಯ ಮುಖ್ಯ ಆರ್ಥಿಕ ತಜ್ಞ ಮಾರ್ಕ್ ಜಾಂಡಿ  ವಿಶ್ಲೇಷಿಸಿದ್ದಾರೆ.

ಜನವರಿಯಲ್ಲಿ 2.6 ರಷ್ಟು ಜಾಗತಿಕ  ಜಿಡಿಪಿ ಬೆಳವಣಿಗೆ 2.6 ರಷ್ಟು ಇರಲಿದೆ ಎಂದು ಮೂಡಿ ನಿರೀಕ್ಷಿಸಿತ್ತು ಆದರೆ, ಕೊರೋನಾವೈರಸ್ ಹಿನ್ನೆಲೆಯಲ್ಲಿ ಪ್ರವಾಸ, ವಾಣಿಜ್ಯ ಮತ್ತು ವ್ಯವಹಾರ ಸ್ಥಗಿತಗೊಂಡಿದ್ದು,  ಜಾಗತಿಕ ಜಿಡಿಪಿ ದರ ಶೇ. 0.4ಕ್ಕೆ ಕುಸಿಯಲಿದೆ ಎಂದು ಮೂಡಿ ಹೇಳಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಚೀನಾದ ಜಿಡಿಪಿ ಶೇ. 27 ರಷ್ಟು ಕುಸಿದಿದೆ ಎಂದು ಜಾಂಡಿ ತಿಳಿಸಿದೆ. ಇತರ ರಾಷ್ಟ್ರಗಳ ಆರ್ಥಿಕತೆಗೆ ಹೋಲಿಸಿದರೆ ಅಮೆರಿಕಾದ ಆರ್ಥಿಕತೆಯಲ್ಲಿ ನಷ್ಟ ಉಂಟಾಗಿದೆ.  ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಂದಾಗಿ ಎಲ್ಲಾ ಕಡೆಗಳಲ್ಲಿ ವ್ಯವಹಾರ ಸ್ಥಗಿತಗೊಂಡಿದ್ದು, ಆರ್ಥಿಕ ಹಾಗೂ ಹಣಕಾಸು ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಜಾಂಡಿ ತಿಳಿಸಿದ್ದಾರೆ.

ಆದಾಗ್ಯೂ, ವೈರಸ್ ಗೆ ಸಂಬಂಧಿಸಿದಂತೆ ಜಾಗತಿಕ ನೀತಿ ನಿರೂಪಕರು ಯಾವ ರೀತಿಯಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಿದೆ ಎಂಬುದರ ಆಧಾರದ ಮೇಲೆ ಪರಿಸ್ಥಿತಿ ನಿರ್ಣಯವಾಗಲಿದೆ. ಆರ್ಥಿಕ ನಷ್ಟಕ್ಕೊಳಗಾದವರಿಗೆ ತ್ವರಿತವಾಗಿ ಪರಿಹಾರವನ್ನು ಸರ್ಕಾರಗಳು ನೀಡಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com