ಆನ್ ಲೈನ್ ನ್ನೂ ಬಿಡದ ಕೊರೋನಾ: ಅಮೆಜಾನ್ ನ 6 ನೌಕರರಲ್ಲಿ ಪತ್ತೆ, ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್ ಕಾರ್ಟ್ 

ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೊರಗಡೆ ಹೋಗಲು ಸಾಧ್ಯವಾಗದೆ ಇತ್ತೀಚೆಗೆ ಆನ್ ಲೈನ್ ಮೊರೆ ಹೋಗುವವರೇ ಹೆಚ್ಚು ಮಂದಿ. ಆದರೆ ಅಮೆರಿಕಾದಲ್ಲಿ ಅಮೆಜಾನ್ ನ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಅಮೆರಿಕಾದ ನ್ಯೂ ಯಾರ್ಕ್ ಸಿಟಿ, ಜಾಕ್ಸನ್ ವಿಲ್ಲೆ, ಫ್ಲೋರಿಡಾ, ಶೆಪೆರ್ಡ್ಸ್ ವಿಲ್ಲೆ, ಕೆಂಟುಕಿ, ಕಾಟಿ,ಟೆಕ್ಸಾಸ್, ಬ್ರೌನ್ ಸ್ಟೌನ್, ಮಿಚಿಗನ್ ಮತ್ತು ಒಕ್ಲಹೊಮಾ ನಗರಗಳಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಟಲಿ, ಸ್ಪೈನ್ ಗಳಲ್ಲಿ ಅಮೆಜಾನ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಸಹ ಕೊರೋನಾ ಕಾಣಿಸಿಕೊಂಡಿದ್ದು, ತಮ್ಮ ಆರೋಗ್ಯಕ್ಕೆ ರಕ್ಷಣೆ ನೀಡಬೇಕೆಂದು ಕಂಪೆನಿಯ ಸುಮಾರು 1,500 ಕಾರ್ಮಿಕರು ಸಹಿ ಹಾಕಿ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಆನ್ ಲೈನ್ ಮಾರುಕಟ್ಟೆ ಫ್ಲಿಪ್ ಕಾರ್ಟ್ ತನ್ನ ಕಾರ್ಯಚಟುವಟಿಕೆಯನ್ನು ಇಂದಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆನ್ ಲೈನ್ ಮೂಲಕ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಜನರು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ ಸಹ ದಿನಸಿ, ದೊಡ್ಡ ಮಟ್ಟದ ಮತ್ತು ಸಣ್ಣ ಮಟ್ಟದ ಸಾಮಗ್ರಿಗಳ ಪೂರೈಕೆಯನ್ನು ಫ್ಲಿಪ್ ಕಾರ್ಟ್ ಇಂದಿನಿಂದ ಸ್ಥಗಿತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com