ವಿಶ್ವದಾದ್ಯಂತ ಕೊರೋನಾ ವೈರಸ್ ರುದ್ರತಾಂಡವ: 20,000 ಬಲಿ, ಸೋಂಕಿತರ ಸಂಖ್ಯೆ 471,035ಕ್ಕೆ ಏರಿಕೆ

ವಿಶ್ವದಾದ್ಯಂತ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ವೈರಸ್ ಪರಿಣಾಮ ಈವರೆಗೂ ವಿಶ್ವದಾದ್ಯಂತ 20,000 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರಿಸ್: ವಿಶ್ವದಾದ್ಯಂತ ಕೊರೋನಾ ವೈರಸ್ ರುದ್ರತಾಂಡವವಾಡುತ್ತಿದ್ದು, ವೈರಸ್ ಪರಿಣಾಮ ಈವರೆಗೂ ವಿಶ್ವದಾದ್ಯಂತ 20,000 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವಿಶ್ವದ ಒಟ್ಟು 182 ದೇಶಗಳಲ್ಲಿ ವೈರಸ್'ಗೆ 20,000 ಮಂದಿ ಬಲಿಯಾಗಿದ್ದು, 471,035ಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಭಾರತದಲ್ಲೂ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡುವುದರೊಂದಿಗೆ ಇಡೀ ವಿಶ್ವವೇ ಮೂರನೇ ಒಂದರಷ್ಟು ಅಥವಾ 260 ಕೋಟಿ ಜನರು ಇದೀಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್ ಡೌನ್ ಘೋಷಣೆ ಮಾಡಿದ್ದು, ತಮ್ಮ ಗಡಿಗಳನ್ನು ಬಂದ್  ಮಾಡಿವೆ. 

ಲಾಕ್ ಡೌನ್ ಘೋಷಿಸಿದ ದೇಶಗಳ ಸಾಲಿಗೆ ಈಗ ಭಾರತ ಮತ್ತು ನ್ಯೂಜಿಲೆಡ್ ದೇಶಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.  18.9 ಕೋಟಿ ಜನರು ಇರುವ 15 ದೇಶಗಳಲ್ಲಿ ಕರ್ಫೂಯ ಘೋಷಣೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com