ಕಾಬೂಲ್ ಗುರುದ್ವಾರದ ಮೇಲೆ ಉಗ್ರ ದಾಳಿ: ಭಾರತದ ರಾಯಭಾರಿಯಿಂದ ಮೃತರ ಕುಟುಂಬಕ್ಕೆ ಸಾಂತ್ವನ

ಉಗ್ರರು ದಾಳಿ ನಡೆಸಿದ ಅಫಘಾನಿಸ್ತಾನದ ಕಾಬೂಲ್​ನಲ್ಲಿರುವ ಸಿಖ್​ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಗುರುವಾರ ಅಫಘಾನ್ ನಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ವಿನಯ್ ಕುಮಾರ್
ವಿನಯ್ ಕುಮಾರ್

ಕಾಬೂಲ್: ಉಗ್ರರು ದಾಳಿ ನಡೆಸಿದ ಅಫಘಾನಿಸ್ತಾನದ ಕಾಬೂಲ್​ನಲ್ಲಿರುವ ಸಿಖ್​ ಧಾರ್ಮಿಕ ಕೇಂದ್ರ ಗುರುದ್ವಾರಕ್ಕೆ ಗುರುವಾರ ಅಫಘಾನ್ ನಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸಿಖ್ಖರ ಧಾರ್ಮಿಕ ಕೇಂದ್ರದ ಮೇಲೆ ನಿನ್ನೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದರು ಮತ್ತು ಎಂಟು ಮಂದಿ ಗಾಯಗೊಂಡಿದ್ದರು. 

ವಿನಯ್ ಕುಮಾರ್ ಅವರು ಇಂದು ಗುರುದ್ವಾರಕ್ಕೆ ಭೇಟಿ ನೀಡಿ, ಸಿಖ್ ಸಮುದಾಯದ ನಾಯಕರನ್ನು, ಹಿರಿಯರನ್ನು ಹಾಗೂ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿದರು. ಅಲ್ಲದೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಗುರುದ್ವಾರದಲ್ಲಿ ಸಿಖ್ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾಗಲೇ ಈ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com