ಲಾಕ್ ಡೌನ್ ನಿಂದಲೇ ಕೊರೋನಾ ವೈರಸ್ ತಡೆ ಅಸಾಧ್ಯ; ಸೋಂಕಿತರನ್ನು, ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಬೇಕು: ವಿಶ್ವ ಆರೋಗ್ಯ ಸಂಸ್ಥೆ

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ಉತ್ತಮವೇ ಆದರೂ, ಲಾಕ್ ಡೌನ್ ನಿಂದ ಮಾತ್ರ ವೈರಸ್ ತಡೆ ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಕಠಿಣ ಮತ್ತು ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)  ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ಜಿನೀವಾ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ಉತ್ತಮವೇ ಆದರೂ, ಲಾಕ್ ಡೌನ್ ನಿಂದ ಮಾತ್ರ ವೈರಸ್ ತಡೆ ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಕಠಿಣ ಮತ್ತು ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)  ಹೇಳಿದೆ.

ಲಾಕ ಡೌನ್ ಆದರೂ ಕೊರೋನಾ ವೈರಸ್ ಹರಡಬಹುದು. ಲಾಕ್ ಡೌನ್ ನಿಂದ ಕೊರೋನಾ ಪ್ರಸರಣವನ್ನು ಮುಂದಕ್ಕೆ ಹಾಕಬಹುದಷ್ಟೇ. ಆದರೆ ಸಂಪೂರ್ಣ ನಿಯಂತ್ರಣ ಸಾಧ್ಯವಿಲ್ಲ. ಇದಕ್ಕೆ ಕಠಿಣ ಮತ್ತು ಸೂಕ್ತ ತುರ್ತು ಕ್ರಮಗಳು ಅಗತ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಕುರಿತಂತೆ  ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, 'ಭಾರತ ವೈರಸ್ ಸೋಂಕು ಪ್ರಸರಣ ವಿರುದ್ಧ ಆಕ್ರಮಣಕಾರಿ ಕ್ರಮ ಕೈಗೊಳ್ಳಬೇಕು. ಲಾಕ್ ಡೌನ್ ಸಮಯದಲ್ಲಿ ವಿದೇಶದಿಂದ ವಾಪಾಸ್ಸಾದವರಿಗೆ ಐಸೋಲೇಷನ್ ಚಿಕಿತ್ಸೆ ನೀಡಬೇಕು.  ಅಲ್ಲದೆ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರ ತಪಾಸಣೆ ಮಾಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇದೇ ವೇಳೆ ಭಾರತ ತನ್ನೆಲ್ಲಾ ನಾಗರಿಕರೂ ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ಇನ್ನಾವುದೇ ಸಂದರ್ಭದಲ್ಲೂ ಹೊರಗೆ ಬಾರದಂತೆ ಕಠಿಣಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಲಾಕ್ ಡೌನ್ ಸಮಯವನ್ನು ಸೂಕ್ತ ರೀತಿಯಲ್ಲಿ  ಉಪಯೋಗಿಸಿಕೊಂಡಿದ್ದೇ ಆದರೆ ವೈರಸ್ ಅನ್ನು ನಿರ್ನಾಮ ಮಾಡಬಹುದು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com