ಇರಾನ್: ಫಾರ್ವರ್ಡ್ ಮೆಸೇಜ್ ನಂಬಿ, ಕೊರೋನಾದಿಂದ ರಕ್ಷಿಸಿಕೊಳ್ಳಲು ಮೆಥನಾಲ್ ಕುಡಿದು 300 ಮಂದಿ ಸಾವು

ಇಡೀ ಜಗತ್ತು ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿದ್ದು, ಇರಾನ್ ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಫಾರ್ವರ್ಡ್ ಮೆಸೇಜ್ ಗಳನ್ನು ನಂಬಿ ಕೊರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು...
ಕೊರೋನಾ ಹರಡುವುದನ್ನು ತಡೆಯಲು ವಾಹನಕ್ಕೆ ಔಷಧಿ ಸಿಂಪಡಿಸುತ್ತಿರುವ ರಕ್ಷಣಾ ಸಿಬ್ಬಂದಿ
ಕೊರೋನಾ ಹರಡುವುದನ್ನು ತಡೆಯಲು ವಾಹನಕ್ಕೆ ಔಷಧಿ ಸಿಂಪಡಿಸುತ್ತಿರುವ ರಕ್ಷಣಾ ಸಿಬ್ಬಂದಿ

ತೆಹ್ರಾನ್: ಇಡೀ ಜಗತ್ತು ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿದ್ದು, ಇರಾನ್ ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಫಾರ್ವರ್ಡ್ ಮೆಸೇಜ್ ಗಳನ್ನು ನಂಬಿ ಕೊರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ವಿಷಕಾರಿ ಮೆಥನಾಲ್ ಕುಡಿದು 300 ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇಸ್ಲಾಮಿಕ್ ರಾಷ್ಟ್ರ ಇರಾನ್ ನಲ್ಲಿ ಕೊರೋನಾದಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಮೆಥನಾಲ್ ಸೇವಿಸಿ ಸುಮಾರು 300 ಜನ ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ.

ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಇರಾನ್ ನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ ಮದ್ಯ ವ್ಯಸನಿಗಳು ಫಾರ್ವರ್ಡ್ ಮೆಸೇಜ್ ಗಳನ್ನು ನಂಬಿ ಮೆಥನಾಲ್ ಕುಡಿಯುತ್ತಿದ್ದಾರೆ. ಇದು ಬಹು ದೊಡ್ಡ ಸಮಸ್ಯೆಯಾಗಿದೆ ಎಂದು ಆರೋಗ್ಯ ಸಚಿವಾಲಯಕ್ಕೆ ಸಹಾಯ ಮಾಡುವ ಇರಾನಿನ ವೈದ್ಯರೊಬ್ಬರು ಶುಕ್ರವಾರ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಜಗತ್ತು ಕೇವಲ ಕೊರೋನಾ ವೈರಸ್ ಸಮಸ್ಯೆ ಎದುರಿಸುತ್ತಿದೆ. ಆದರೆ ಎರಡು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಕೊರೋನಾ ವೈರಸ್ ವಿರುದ್ಧ ಹೋರಾಡಬೇಕು ಮತ್ತೊಂದು ಮೆಥನಾಲ್ ಕುಡಿದವರ ಚಿಕಿತ್ಸೆಗೆ ಶ್ರಮಿಸಬೇಕಿದೆ ಎಂದು ಆರೋಗ್ಯ ಸಚಿವಾಲಯದ ಸಲಹೆಗಾರ ಡಾ. ಹೊಸೆನ್ ಹಸಾನಿಯನ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com