ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಜಿ20 ರಾಷ್ಟ್ರಗಳ ಮೆಚ್ಚುಗೆ, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ

ವಿಶ್ವದ 190 ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಭಾರತದ ಕಾರ್ಯವೈಖರಿಗೆ ಜಿ20 ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲು  ನಿರ್ಧರಿಸಿವೆ.
ಜಿ20 ಸಭೆ (ಸಂಗ್ರಹ ಚಿತ್ರ)
ಜಿ20 ಸಭೆ (ಸಂಗ್ರಹ ಚಿತ್ರ)

ನವದೆಹಲಿ: ವಿಶ್ವದ 190 ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಭಾರತದ ಕಾರ್ಯವೈಖರಿಗೆ ಜಿ20 ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲು  ನಿರ್ಧರಿಸಿವೆ.

ಕೊರೋನಾ ವೈರಸ್ ನಿರ್ಮೂಲನೆಗೆ ಭಾರತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿ20 ರಾಷ್ಟ್ರಗಳ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಇನ್ನಷ್ಟು ಕಠಿಣ ಕ್ರಮಗಳ ಅಗತ್ಯತೆ ಕುರಿತು ಭಾರತಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕೊರೊನಾ  ವೈರಸ್‌ನಿಂದ ಆರ್ಥಿಕತೆ ಬಹುದೊಡ್ಡ ಹೊಡೆತ ಬಿದ್ದಿದ್ದು, ಎಲ್ಲ ರಾಷ್ಟ್ರಗಳು ಸೇರಿ ಜಾಗತಿಕ ಆರ್ಥಿಕ ಪುನಶ್ಚೇತನಕ್ಕಾಗಿ ಹಂತ ಹಂತವಾಗಿ ಒಟ್ಟು 382 ಲಕ್ಷ ಕೋಟಿ ರೂ.ಗಳನ್ನು ಜಾಗತಿಕ ಮಾರುಕಟ್ಟೆಗೆ ಹೂಡಿಕೆ ಮಾಡಲು ಶೃಂಗ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೊರೋನಾ ಆತಂಕದಿಂದ  ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ಹಿಂಜರಿತವನ್ನು ಸರಿದೂಗಿಸಲು ಈ ಹೂಡಿಕೆ ಪರಿಹಾರದಂತೆ ಕೆಲಸ ಮಾಡಲಿದೆ ಎಂಬ ವಿಶ್ವಾಸವನ್ನು ಜಾಗತಿಕ ನಾಯಕರು ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಆರ್ಥಿಕ ಕ್ರಿಯಾ ಯೋಜನೆಗೆ ಕರೆ ನೀಡಿದ ಪ್ರಧಾನಿ ಮೋದಿ, ವಿಶ್ವ ಆರೋಗ್ಯ ಸಂಸ್ಥೆಯನ್ನು ಸುಧಾರಿಸಲು ಒತ್ತಾಯಿಸಿದರು. 'ಬಹುಪಕ್ಷಿಯ ವೇದಿಕೆಗಳು ಮಾನವೀಯ ಹಿತಾಸಕ್ತಿ ಉತ್ತೇಜಿಸುವಲ್ಲಿ ಕಡಿಮೆ ಪರಿಣಾಮಕಾರಿಯಾಗಿವೆ. ಅದು ಭಯೋತ್ಪಾದನೆ  ವಿಷಯವಾಗಿರಬಹುದು ಅಥವಾ ಹವಾಮಾನ ಬದಲಾವಣೆ ವಿಷಯವಾಗಿರಬಹುದು. ಮತ್ತು ಈಗ ಇನ್ನೊಂದು ಉದಾಹರಣೆಯಿದೆ. ಈ ಬಿಕ್ಕಟ್ಟು ನಮ್ಮ ಅಮೂಲ್ಯವಾದ ಸಂಪನ್ಮೂಲವಾದ ನಮ್ಮ ಜೀವನ ಮತ್ತು ನಮ್ಮ ಆರೋಗ್ಯವನ್ನು ಕಸಿದುಕೊಳ್ಳುತ್ತಿದೆ. ಜಿ 20 ಖಾತೆಯಲ್ಲಿ ಜಗತ್ತಿನ  ಶೇ.80ರಷ್ಟು ಜಿಡಿಪಿ ಇದೆ ಮತ್ತು ಜಾಗತಿಕವಾಗಿ ಶೇ.60ರಷ್ಟು ಜನಸಂಖ್ಯೆ ಇದೆ. ಇದೇ ಸಮಯದಲ್ಲಿ ನಮ್ಮ ಬಳಿ ಜಾಗತಿಕವಾಗಿ ಶೇ.90ರಷ್ಟು ಕೋವಿಡ್-19 ಪ್ರಕರಣಗಳಿವೆ ಮತ್ತು ಇದರಿಂದ ಉಂಟಾದ ಮರಣ ಪ್ರಮಾಣ ಶೇ.88ರಷ್ಟಿದೆ ಎಂದು ಹೇಳಿದರು. ಜೊತೆಗೆ ನಮ್ಮ ಆರ್ಥಿಕತೆಗಳು  ಬಲವಾಗಿರಬಹುದು, ಆದರೆ ನಮ್ಮ ವ್ಯವಸ್ಥೆಗಳು ಸ್ಪಷ್ಟವಾಗಿ ದುರ್ಬಲವಾಗಿವೆ ಎಂದರು. 

ಪಾರದರ್ಶಕ, ದೃಢ, ಸಂಘಟಿತ, ಬೃಹತ್‌ ಪ್ರಮಾಣದ ಮತ್ತು ವಿಜ್ಞಾನ ಆಧಾರಿತ ಹೋರಾಟ
ಕೊರೊನಾ ವೈರಸ್‌ ವಿರುದ್ಧ ನಮ್ಮ ಹೋರಾಟ ಒಗ್ಗಟ್ಟಿನ ಮನೋಭಾವದೊಂದಿಗೆ ಪಾರದರ್ಶಕ, ದೃಢ, ಸಂಘಟಿತ, ಬೃಹತ್‌ ಪ್ರಮಾಣದ ಮತ್ತು ವಿಜ್ಞಾನ ಆಧಾರಿತವಾಗಿದೆ. ನಮ್ಮೆಲ್ಲರ ಸಾಮಾನ್ಯ ಬೆದರಿಕೆಯ ವಿರುದ್ಧ ಹೋರಾಡಲು ನಾವು ಸಂಘಟಿತರಾಗಿದ್ದೇವೆ ಎಂದು ಜಿ20 ಶೃಂಗಸಭೆ  ಹೇಳಿದೆ. ಐಎಂಎಫ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಪ್ರಾದೇಶಿಕ ಬ್ಯಾಂಕುಗಳೊಂದಿಗೆ ದೃಢವಾದ ಆರ್ಥಿಕ ಪ್ಯಾಕೇಜ್‌ನ್ನು ಶೀಘ್ರ ಘೋಷಿಸುವುದಾಗಿ ಜಿ20 ಶೃಂಗ ಹೇಳಿದೆ. ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ನಾಯಕರು ಸಂಶೋಧನೆ ಮತ್ತು ಡೇಟಾ ಹಂಚಿಕೊಳ್ಳಲು,  ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವೈದ್ಯಕೀಯ ಉತ್ಪನ್ನಗಳನ್ನು ಪೂರೈಸಲು, ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com