ಕೊರೋನಾಗೆ ವಿಶ್ವದ ದೊಡ್ಡಣ್ಣ ತತ್ತರ: ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾಕ್ಕೆ ಅಗ್ರಸ್ಥಾನ!

ನಿನ್ನೆ ಒಂದೇ ದಿನ ಅಮೆರಿಕಾದಲ್ಲಿ 16 ಸಾವಿರ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದೆ. ವರ್ಲ್ಡೊಮೀಟರ್ ನೀಡಿರುವ ಮಾಹಿತಿ ಪ್ರಕಾರ ಅಮೆರಿಕಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 85, 088 ಆಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಂದಿ ಅಮೆರಿಕಾದ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ನಿನ್ನೆ ಒಂದೇ ದಿನ ಅಮೆರಿಕಾದಲ್ಲಿ 16 ಸಾವಿರ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದೆ. ವರ್ಲ್ಡೊಮೀಟರ್ ನೀಡಿರುವ ಮಾಹಿತಿ ಪ್ರಕಾರ ಅಮೆರಿಕಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 85, 088 ಆಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಂದಿ ಅಮೆರಿಕಾದ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ

ಚೀನಾದಲ್ಲಿ 81 ಸಾವಿರದ 285, ಇಟಲಿಯಲ್ಲಿ 80 ಸಾವಿರದ 589 ಮಂದಿ ಮಾರಕ ನೊವೆಲ್ ಕೊರೋನಾವೈರಸ್ ಗೆ ತುತ್ತಾಗಿದ್ದು, ಈ ದೇಶಗಳನ್ನು ಮೀರಿದ ಹೆಚ್ಚಿನ ಪ್ರಕರಣಗಳು ಅಮೆರಿಕಾದಲ್ಲಿ ದೃಢಪಟ್ಟಿವೆ.

ಜಾಗತಿಕವಾಗಿ ಕೊರೋನಾಸೋಂಕು ಸೋಂಕಿತರು ಹಾಗೂ ಸಾವಿನ ಬಗ್ಗೆ ವರ್ಲ್ಡೊಮೀಟರ್ ವೆಬ್ ಸೈಟ್ ನೀಡಿರುವ ದಾಖಲೆಗಳ ಪ್ರಕಾರ, ಗುರುವಾರ  ಒಂದೇ ದಿನ 16 ಸಾವಿರದ 877 ಪ್ರಕರಣಗಳು ವರದಿಯಾಗುವುದರೊಂದಿಗೆ ಅಮೆರಿಕಾ ಒಂದರಲ್ಲಿಯೇ ಈ ಸೋಂಕು ತಗುಲಿದವರ ಸಂಖ್ಯೆ 85 ಸಾವಿರದ 088 ಆಗಿದೆ. ವಾರಗಳ ಹಿಂದಷ್ಟೇ ಇಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8 ಸಾವಿರದಷ್ಟಿತ್ತು.

ಒಂದು ವಾರದ ಅಂತರದಲ್ಲಿ 10 ಪಟ್ಟು ಹೆಚ್ಚಾಗಿರುವುದು ಅಪಾಯಕಾರಿಯಾಗಿದೆ. ನಿನ್ನೆ ಒಂದೇ ದಿನ ಅಮೆರಿಕಾದಲ್ಲಿ  263 ಸಾವಿನ ಪ್ರಕರಣಗಳು ವರದಿಯಾಗಿದ್ದು, ಕೊರೋನಾವೈರಸ್ ನಿಂದಾಗಿ ಈವರೆಗೂ 1290 ಅಮೆರಿಕಾದ ಜನರು ಮೃತಪಟ್ಟಿದ್ದಾರೆ. 2 ಸಾವಿರ ಗಂಭೀರ ಪ್ರಕರಣಗಳು ವರದಿಯಾಗಿವೆ.

ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚೀನಾದಲ್ಲಿ ಈ ಸಾಂಕ್ರಾಮಿಕ ರೋಗದಿಂದ 3, 287 ಮಂದಿ ಸಾವನ್ನಪ್ಪಿದ್ದರೆ ಇಟಲಿಯಲ್ಲಿ ಮೃತರ ಸಂಖ್ಯೆ 8, 215 ಆಗಿದೆ. 

ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದಲ್ಲಿನ ಸಂಖ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ನ್ಯೂಯಾರ್ಕ್ ನಗರದಲ್ಲಿ ಶೇ. 55 ರಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿರುವುದಾಗಿ ಶ್ವೇತಭವನ ಕೊರೋನಾವೈರಸ್ ಕಾರ್ಯಪಡೆ ಸಮನ್ವಾಧಿಕಾರಿ ಡಾ.  ಡೆಬೊರಾ ಬ್ರಿಕ್ಸ್ ತಿಳಿಸಿದ್ದಾರೆ.  ನ್ಯೂಜೆರ್ಸಿ ಸೇರಿದಂತೆ ಹಲವಡೆ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವುದಕ್ಕೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com