ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ

ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರೋಮ್: ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.

“ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸ್ಮರಣಾರ್ಥ ಮಾರ್ಚ್ 31 ರಂದು 0000 ಗಂಟೆಗೆ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುವುದು ಮತ್ತು ಒಂದು ನಿಮಿಷ ಮೌನಾಚರಿಸಲಾಗುವುದು” ಎಂದು ಎ ಎನ್ ಸಿ ಐ ಅಧ್ಯಕ್ಷ ಡೆಕಾರೋ ಆಂಟೋನಿಯೋ ಟ್ವೀಟ್ ಮಾಡಿದ್ದಾರೆ.

ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಿಗೆ ಶ್ರದ್ಧಾಂಜಲಿ ಸೂಚಕವಾಗಿ ಬೆರ್ಗಾಮೋ ಪ್ರಾಂತ್ಯದ ಅಧ್ಯಕ್ಷರ ಮೌನಾಚರಣೆ ಉಪಕ್ರಮವನ್ನು ಅನುಸರಿಸಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com