ಚೀನಾದಲ್ಲಿ ಕೊರೋನಾ ವೈರಸ್ ಮೊಟ್ಟ ಮೊದಲು ಹರಡಿದ ವ್ಯಕ್ತಿ ಪೇಷೆಂಟ್ ಝೀರೋ ಇವರೇ....

ಕೊರೋನಾ ವೈರಸ್ ಗೆ ನಿರ್ದಿಷ್ಟ ಚಿಕಿತ್ಸೆಯ ಬಗ್ಗೆ ಜಗತ್ತೇ ತಲೆಕೆಡಿಸಿಕೊಂಡು ಕೂತಿರುವುದು ಒಂದೆಡೆಯಾದರೆ, ಈ ರೋಗ ಚೀನಾದಲ್ಲಿ ಮೊದಲು ಹರಡಿದ್ದು ಯಾರಿಗೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಕೊರೋನಾ ವೈರಸ್ ಗೆ ನಿರ್ದಿಷ್ಟ ಚಿಕಿತ್ಸೆಯ ಬಗ್ಗೆ ಜಗತ್ತೇ ತಲೆಕೆಡಿಸಿಕೊಂಡು ಕೂತಿರುವುದು ಒಂದೆಡೆಯಾದರೆ, ಈ ರೋಗ ಚೀನಾದಲ್ಲಿ ಮೊದಲು ಹರಡಿದ್ದು ಯಾರಿಗೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ. 

ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಸಿಕ್ಕಿಲ್ಲವಾದರೂ ಚೀನಾ ’ಪೇಷೆಂಟ್ ಝೀರೋ’ ಗುರುತನ್ನು ಪತ್ತೆ ಮಾಡಿದೆ. ಮಾಧ್ಯಮಗಳ ವರದಿಯ ಪ್ರಕಾರ ಮಾರ್ಕೆಟ್ ನಲ್ಲಿ ಶ್ರಿಂಪ್ (ಸೀಗಡಿ) ಮಾರಾಟ ಮಾಡುತ್ತಿದ್ದ ವುಹಾನ್ ನ ಹುವಾನಾನ್ ಸೀಫುಡ್ ಮಾರುಕಟ್ಟೆಯ 57 ವರ್ಷದ ಮಹಿಳೆಗೆ ಮೊದಲ ಕೊರೋನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿ. 

ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ, ಈ ಬಗ್ಗೆ ಮಾಹಿತಿ ಇಲ್ಲದ ಮಹಿಳೆ ಇದೊಂದು  ಸಾಮಾನ್ಯ ಜ್ವರ ಎಂದು ಭಾವಿಸಿ ಸ್ಥಳೀಯ ಕ್ಲಿನಿಕ್ ಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ದಿನದಿಂದ ದಿನಕ್ಕೆ ರೋಗ ಉಲ್ಬಣಿಸಿದ ಪರಿಣಾಮ ಆ ಪ್ರಾಂತ್ಯದಲ್ಲೇ ಹೆಚ್ಚು ಸೌಲಭ್ಯಗಳುಳ್ಳ ವುಹಾನ್ ಯೂನಿಯನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ರೋಗಲಕ್ಷಣಗಳನ್ನು ಗಮನಿಸಿದ ಯೂನಿಯನ್ ಆಸ್ಪತ್ರೆಯ ಸಿಬ್ಬಂದಿಗಳು ಈಕೆಗೆ ಬಂದಿರುವುದು ವಿಚಿತ್ರ ಜ್ವರವೆಂದೂ, ಇಂಥಹದ್ದೇ ರೋಗ ಲಕ್ಷಣಗಳೊಂದಿಗೆ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿ, ಕ್ವಾರಂಟೈನ್ ಮಾಡಿ ಚಿಕಿತ್ಸೆ ಪ್ರಾರಂಭಿಸಿದ್ದರು. ಆದರೆ ಚಿಕಿತ್ಸೆ ಪಡೆದು ಗುಣಮುಖರಾಗುವುದಕ್ಕೆ ಈ ಮಹಿಳೆ ತೆಗೆದುಕೊಂಡ ಅವಧಿ ಬರೊಬ್ಬರಿ ಒಂದು ತಿಂಗಳು ಎಂದು ದಿ ಮಿರರ್ ಯು.ಕೆ ಚೀನಾ ಮಾಧ್ಯಮದ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. 

ಕೊರೋನಾ ವೈರಸ್ ಗೆ ಪ್ರಬೇಧಗಳಿಗೆ ಸುಲಭವಾಗಿ ಹರಡುವ ಸಾಮರ್ಥ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದೇ ಮಾದರಿಯ ಒಂದಷ್ಟು ವೈರಸ್ ಗಳನ್ನು ತುರ್ತಾಗಿ ಎದುರಿಸಲು  ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com