ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ

ಕೊರೋನಾ ವೈರಸ್​ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

Published: 29th March 2020 01:05 AM  |   Last Updated: 29th March 2020 01:05 AM   |  A+A-


Italy Coronavirus

ಇಟಲಿಯಲ್ಲಿ ಕೊರೋನಾ

Posted By : Srinivasamurthy VN
Source : ANI

ಸ್ಪೇನ್: ಕೊರೋನಾ ವೈರಸ್​ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಇಟಲಿಯಲ್ಲಿ ಕೊರೋನಾಗೆ ಶುಕ್ರವಾರ ಒಂದೇ ದಿನ 1000ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಆ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ 10,023ಕ್ಕೇರಿದೆ. ಅಂತೆಯೇ ಸೋಂಕಿತರ ಸಂಖ್ಯೆ 1,15,000ಕ್ಕೆ ಏರಿಕೆಯಾಗಿದೆ. 

ಇದಕ್ಕೂ ಮೊದಲು ಮಾ. 21ರಂದು ಇಟಲಿಯಲ್ಲಿ 793 ಜನರು ಸಾವನ್ನಪ್ಪಿದ್ದರು. ಆದರೆ, ನಿನ್ನೆ ಒಂದೇ ದಿನ ಸುಮಾರು 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್​ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ. ಇಟಲಿಯಲ್ಲಿ ಸೋಮವಾರ- 602, ಮಂಗಳವಾರ-  743, ಬುಧವಾರ- 683, ಗುರುವಾರ- 712, ಶುಕ್ರವಾರ- 1000 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾವಿನ ಸಂಖ್ಯೆ  ಹೆಚ್ಚಾಗುವ ಸಾಧ್ಯತೆಯಿದೆ.

ಫೆ. 19ರಂದು ಇಟಲಿಯಲ್ಲಿನ ಸ್ಯಾನ್​ ಸಿರೋ ಸ್ಟೇಡಿಯಂನಲ್ಲಿ ಸಾಕರ್ ಪಂದ್ಯ ನಡೆದಿತ್ತು. ಇದಕ್ಕೆ ನಾನಾ ದೇಶಗಳ ಕ್ರೀಡಾಪ್ರೇಮಿಗಳು, ಆಟಗಾರರು ಬಂದಿದ್ದರು. ಒಟ್ಟು 40,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಈ ಪಂದ್ಯದ ಬಳಿಕ ಚೀನಾದಲ್ಲಿ ಕೊರೋನಾ ವೈರಸ್​​ ಹರಡಿರುವ  ಬಗ್ಗೆ ವರದಿಯಾಗಿತ್ತು. ಇಟಲಿಯಲ್ಲಿ ಆ ಪಂದ್ಯಾವಳಿ ನಡೆದ ಪ್ರದೇಶದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿನ ಪ್ರಮಾಣ ಕಾಣಿಸಿಕೊಂಡಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp