ರಾಜಮನೆತನಕ್ಕೂ ತಟ್ಟಿದ ಕೊರೋನಾ: ವೈರಸ್'ಗೆ ಸ್ಪೇನ್ ರಾಜಕುಮಾರಿ ತೆರೆಸಾ ಬಲಿ

ಮಹಾಮಾರಿ ಕೊರೋನಾ ವೈರಸ್ ಇದೀಗ ರಾಜಮನೆತನಕ್ಕೂ ತಟ್ಟಿದ್ದು, ವೈರಸ್'ಗೆ ಸ್ಪೇನ್ ರಾಜಕುಮಾರಿಯೊಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. 
ರಾಜಮನೆತನಕ್ಕೂ ತಟ್ಟಿದ ಕೊರೋನಾ: ವೈರಸ್'ಗೆ ಸ್ಪೇನ್ ರಾಜಕುಮಾರಿ ತೆರೆಸಾ ಬಲಿ
ರಾಜಮನೆತನಕ್ಕೂ ತಟ್ಟಿದ ಕೊರೋನಾ: ವೈರಸ್'ಗೆ ಸ್ಪೇನ್ ರಾಜಕುಮಾರಿ ತೆರೆಸಾ ಬಲಿ

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್ ಇದೀಗ ರಾಜಮನೆತನಕ್ಕೂ ತಟ್ಟಿದ್ದು, ವೈರಸ್'ಗೆ ಸ್ಪೇನ್ ರಾಜಕುಮಾರಿಯೊಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಸ್ಪೇನ್ ರಾಜಕುಮಾರಿ ಮಾರಿಯಾ ತೆರೆಸಾ ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಸ್ಪೇನ್ ರಾಜಕುಮಾರ ಫೆಲಿಪೆ VI ಅವರ ಸಂಬಂಧಿಯಾಗಿರುವ 86 ವರ್ಷದ ತೆರೆಸಾ ಅವರು ವೈರಸ್ ನಿಂದ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

ಈ ಕುರಿತು ತೆರೆಸಾ ಸಹೋದರ ಪ್ರಿನ್ಸ್ ಸಿಕ್ಟೋ  ಎನ್ರಿಕ್ ಡಿ ಬೊರ್ಬನ್ ಅಧಿಕೃತ ಘೋಷಣೆ ಮಾಡಿದ್ದು, ನಮ್ಮ ಸಹೋದರಿ ಮಾರಿಯಾ ತೆರೆಸಾ ಡಿ ಬೊರ್ಬನ್ ಅವರು 86ನೇ ವಯಸ್ಸಿನಲ್ಲಿ ಕೊರೋನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. 

1933ರ ಜುಲೈ 28 ರಂದು ಜನಿಸಿದ್ದ ಮಾರಿಯಾ ತೆರೆಸಾ ಅವರು ಫ್ರಾನ್ಸ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಪ್ಯಾರಿಸ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು.  ಮಾರಿಯಾ ಅವರನ್ನು ರೆಡ್ ಪ್ರಿನ್ಸೆಸ್ ಎಂದು ಕರೆಯಲಾಗುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com