ಕೊರೋನಾವೈರಸ್ ನಿಂದ ಆರ್ಥಿಕತೆಗೆ ಹೊಡೆತ, ಜರ್ಮನ್ ರಾಜ್ಯ ಹಣಕಾಸು ಸಚಿವ ಆತ್ಮಹತ್ಯೆ

ಕೊರೋನಾವೈರಸ್ ನಿಂದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದ ಹಿನ್ನೆಲೆಯಲ್ಲಿ ತೀವ್ರ ಆತಂಕ್ಕೊಳಗಾದ ಜರ್ಮನಿಯ ರಾಜ್ಯ ಹಣಕಾಸು ಸಚಿವ ಥಾಮಸ್ ಸ್ಕೇಫರ್ ಹೆಸ್ಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜರ್ಮಿಯ ರಾಜ್ಯ ಹಣಕಾಸು ಸಚಿವ
ಜರ್ಮಿಯ ರಾಜ್ಯ ಹಣಕಾಸು ಸಚಿವ

ಫ್ರಾಂಕ್ ಫರ್ಟ್: ಕೊರೋನಾವೈರಸ್ ನಿಂದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದ ಹಿನ್ನೆಲೆಯಲ್ಲಿ ತೀವ್ರ ಆತಂಕ್ಕೊಳಗಾದ ಜರ್ಮನಿಯ ರಾಜ್ಯ ಹಣಕಾಸು ಸಚಿವ ಥಾಮಸ್ ಸ್ಕೇಫರ್ ಹೆಸ್ಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲ್ವೆ ಹಳಿಯೊಂದರ ಬಳಿ 54 ವರ್ಷದ ಥಾಮಸ್ ಸ್ಕೇಫರ್ ಅವರ ಮೃತದೇಹ ಪತ್ತೆಯಾಗಿದೆ.  ಥಾಮಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೈಸ್‌ಬಾಡೆನ್ ಪ್ರಾಸಿಕ್ಯೂಷನ್ ಕಚೇರಿ ತಿಳಿಸಿದೆ.

ಥಾಮಸ್ ಆತ್ಮಹತ್ಯೆ ನಂಬಲಿಕ್ಕೆ ಆಗುತ್ತಿಲ್ಲ, ತುಂಬಾ ಆಘಾತವಾಗಿದೆ.ನಮ್ಮಗೆಲ್ಲಾ ತೀವ್ರ ದು:ಖವಾಗುತ್ತಿದೆ ಎಂದು ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಆಪ್ತರಾದ  ವಾಲ್ಕರ್ ಬೌಫಿರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜರ್ಮನಿಯ ಆರ್ಥಿಕ ಬಂಡವಾಳದ ಮೂಲವಾಗಿರುವ ಫ್ರಾಂಕ್ ಫರ್ಟ್ ನಲ್ಲಿಯೇ ವಾಸವಾಗಿದ್ದರು. ಯುರೋಪಿಯನ್ ಕೇಂದ್ರ ಬ್ಯಾಂಕ್ ಮತ್ತಿತರ ದೊಡ್ಡ ಬ್ಯಾಂಕ್ ಗಳು ಫ್ರಾಂಕ್ ಫರ್ಟ್ ನಲ್ಲಿಯೇ ಇವೆ.

ಕೊರೋನಾವೈರಸ್ ಆರ್ಥಿಕತೆ ಮೇಲೆ ಉಂಟುಮಾಡುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಥಾಮಸ್ ತೀವ್ರ ಚಿಂತಿತರಾಗಿದ್ದರು. ಇಂತಹ ಕಷ್ಟದ ಸಮಯದಲ್ಲಿ ಅವರಂತಹವರು ಯಾರಾದರೂ ನಮಗೆ ಬೇಕಾಗಬಹುದು ಎಂದು ಬೌಫಿರ್ ಹೇಳಿದ್ದಾರೆ. 

ವಾಲ್ಕರ್ ಬೌಫಿರ್ ಅವರಂತೆ ಥಾಮಸ್ ಸ್ಕೇಪರ್ ಕೂಡಾ ಏಂಜೆಲಾ ಮರ್ಕೆಲಾ ಅವರ  ಸಿಡಿಯು ಪಕ್ಷದ ಪ್ರಮುಖ ವ್ಯಕ್ತಿಯಾಗಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಥಾಮಸ್ ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com