ಲಾಕ್ ಡೌನ್ ಮಾಡಿ ಮೋದಿ ಏನು ಸಾಧಿಸಲ್ಲ, ನಾನು ಲಾಕ್ ಡೌನ್ ಮಾಡೋದಿಲ್ಲ: ಇಮ್ರಾನ್ ಖಾನ್ ಉದ್ಧಟತನ!

ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಪಾಕ್ ಪ್ರಧಾನಿ ಮಾತ್ರ ಸೋಂಕಿತರ ಸಂಖ್ಯೆ 1700 ದಾಟಿದರೂ ಲಾಕ್ ಡೌನ್ ತೀರ್ಮಾನಕೈಗೊಳ್ಳದೆ ಮೋದಿ ಅವರನ್ನು ದೂಷಿಸುತ್ತಾ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ. 
ನರೇಂದ್ರ ಮೋದಿ-ಇಮ್ರಾನ್ ಖಾನ್
ನರೇಂದ್ರ ಮೋದಿ-ಇಮ್ರಾನ್ ಖಾನ್

ಇಸ್ಲಾಮಾಬಾದ್: ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಪಾಕ್ ಪ್ರಧಾನಿ ಮಾತ್ರ ಸೋಂಕಿತರ ಸಂಖ್ಯೆ 1700 ದಾಟಿದರೂ ಲಾಕ್ ಡೌನ್ ತೀರ್ಮಾನಕೈಗೊಳ್ಳದೆ ಮೋದಿ ಅವರನ್ನು ದೂಷಿಸುತ್ತಾ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಬಳಿಕ ದೇಶದ ಜನರ ಕ್ಷಮೆ ಕೇಳಿದರೂ ಪ್ರಯೋಜನವಿಲ್ಲ. ಲಾಕ್ ಡೌನ್ ನಿಂದ ಬಡವರಿಗೆ ಕಷ್ಟವಾಗುತ್ತದೆ. ಲಾಕ್ ಡೌನ್ ಮಾಡಿದ ತಕ್ಷಣ ವೈರಸ್ ಹರಡುವಿಕೆ ನಿಲ್ಲುತ್ತದೆ ಎಂದು ನಾನು ನಂಬಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 

ಒಂದೆಡೆ ನರೇಂದ್ರ ಮೋದಿ ಅವರ ಲಾಕ್ ಡೌನ್ ಕ್ರಮವನ್ನು ದೂಷಿಸಿರುವ ಇಮ್ರಾನ್ ಖಾನ್ ಮತ್ತೊಂದೆಡೆ ವುಹಾನ್ ಲಾಕ್ ಡೌನ್ ಮಾಡಿ ಕೊರೋನಾ ವೈರಸ್ ನಿಯಂತ್ರಣ ಮಾಡಿದ್ದ ಚೀನಾದ ಕ್ರಮಗಳನ್ನು ಶ್ಲಾಘಿಸಿದ್ದಾರೆ. 

ಬಹುದೊಡ್ಡ ಶಕ್ತಿಯೆಂದರೆ ಅದು ಯುವಜನತೆ. ಕೊರೋನಾ ವಿರುದ್ಧ ನಾವು ಇದನ್ನು ಬಲಪ್ರಯೋಗ ಮಾಡುತ್ತೇವೆ ಎಂದರು. ಯುವಜನರು ಕೊರೋನಾ ವಿರುದ್ಧ ಹೋರಾಡಲು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com