ಪತ್ರಿಕೆ ವಿರುದ್ಧ ಮೊಕದ್ದಮೆ: ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಕೋರ್ಟ್ ನಲ್ಲಿ ಮೊದಲ ಸುತ್ತಿನಲ್ಲಿ ಸೋಲು

ತನ್ನಪರಿತ್ಯಕ್ತ ತಂದೆಗೆ ಬರೆದ ಪತ್ರದ ಆಯ್ದ ಭಾಗಗಳನ್ನು ಹೊರಹಾಕಿದ ಬ್ರಿಟಿಷ್ ಪತ್ರಿಕೆಯ ಮಾಲಿಕರ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದ ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಮೊದಲ ಸುತ್ತಿನಲ್ಲಿ ಸೋಲು ಕಂಡಿದೆ. ನ್ಯಾಯಾಧೀಶರು ಅವರ ಮೊಕದ್ದಮೆಯ ಭಾಗವನ್ನು ವಜಾಗೊಳಿಸಿದ್ದಾರೆ.
ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್
ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್

ಲಂಡನ್: ತನ್ನಪರಿತ್ಯಕ್ತ ತಂದೆಗೆ ಬರೆದ ಪತ್ರದ ಆಯ್ದ ಭಾಗಗಳನ್ನು ಹೊರಹಾಕಿದ ಬ್ರಿಟಿಷ್ ಪತ್ರಿಕೆಯ ಮಾಲಿಕರ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದ ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಮೊದಲ ಸುತ್ತಿನಲ್ಲಿ ಸೋಲು ಕಂಡಿದೆ. ನ್ಯಾಯಾಧೀಶರು ಅವರ ಮೊಕದ್ದಮೆಯ ಭಾಗವನ್ನು ವಜಾಗೊಳಿಸಿದ್ದಾರೆ.

ನಟಿಯಾಗಿದ್ದ ಮೇಘನ್ ಮಾರ್ಕೆಲ್ ಬ್ರಿಟನ್ ಯುವರಾಜ ಪ್ರಿನ್ಸ್ ಹ್ಯಾರಿಯವರನ್ನು ವಿವಾಹವಾದ ನಂತರ ಅವರು 2018ರ ಆಗಸ್ಟ್ ನಲ್ಲಿ ತನ್ನ ಪರಿತ್ಯಕ್ತ ತಂದೆಗೆ ಬರೆದಿದ್ದರು ಎನ್ನಲಾದ ಪತ್ರದ ಭಾಗವೊಂದನ್ನು ಅಸೋಸಿಯೇಟೆಡ್ ಪತ್ರಿಕೆ ಮೇಲ್ ಆಫ್ ಸಂಡೆ ಎಂಬ ತಲೆಬರಹದಡಿ ಸರಣಿ ಲೇಖನಗಳನ್ನು ಕಳೆದ ವರ್ಷ ಪ್ರಕಟಿಸಿತ್ತು. ಇದರ ವಿರುದ್ಧ ಯುವರಾಣಿ ಮೇಘನ್ ಮಾರ್ಕೆಲ್ ತಮ್ಮ ಗೌಪ್ಯತೆ, ಖಾಸಗಿತನಗೆ ಧಕ್ಕೆಯಾಗಿದೆ, ಪತ್ರಿಕೆ ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಲಂಡನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿ ನಿನ್ನೆ ಆಯ್ದ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮಾರ್ಕ್ ವರ್ಬಿ, ಯುವರಾಣಿ ಮೇಘನ್ ಮಾರ್ಕೆಲ್ ಮಾಡುತ್ತಿರುವ ಆರೋಪಗಳೆಲ್ಲವೂ ಪ್ರಾಮಾಣಿಕವಾಗಿಲ್ಲ ಎಂದು ಹೇಳಿದ್ದಾರೆ. ಪತ್ರಿಕೆಯಲ್ಲಿ ಪತ್ರ ಪ್ರಕಟಿಸುವ ಮೂಲಕ ಮೇಘನ್ ಮಾರ್ಕೆಲ್ ಮತ್ತು ಅವರ ತಂದೆ ಥೋಮಸ್ ಮಾರ್ಕೆಲ್ ನಡುವೆ ವಿವಾದವನ್ನು ಇನ್ನಷ್ಟು ಹೆಚ್ಚಿಸಲು, ಆಕೆಯ ವಿರುದ್ಧ ಆಕ್ರಮಣಕಾರಿ ಕಥೆಗಳನ್ನು ಸೃಷ್ಟಿಸಿ ಮಾನಹಾನಿ ಮಾಡುವ ಉದ್ದೇಶ ಹೊಂದಿತ್ತು ಎಂಬ ವಾದವನ್ನು ಸಹ ನ್ಯಾಯಾಧೀಶರು ತಳ್ಳಿಹಾಕಿದ್ದಾರೆ.

ಇಲ್ಲಿ ಯುವರಾಣಿ ಮಾಡಿರುವ ಆರೋಪಗಳು ಅಪ್ರಸ್ತುತವಾಗಿದೆ.ಖಾಸಗಿ ಮಾಹಿತಿ ದುರುಪಯೋಗ, ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ದತ್ತಾಂಶ ಉಲ್ಲಂಘನೆ ಸಂರಕ್ಷಣಾ ಕಾಯ್ದೆಯಡಿ ಪತ್ರಿಕೆಯ ಪ್ರಕಾಶಕರು ತಪ್ಪಿತಸ್ಥರೆಂದು ಸಾಬೀತುಪಡಿಸಲು ಯಾವುದೇ ಕಾರಣಗಳಿಲ್ಲ,ಇದು ಅಪ್ರಸ್ತುತ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

2018ರಲ್ಲಿ ಬ್ರಿಟನ್ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ವಿವಾಹ ಸಮಾರಂಭಕ್ಕೆ ಆಕೆಯ ತಂದೆ ಥೋಮಸ್ ಮಾರ್ಕೆಲ್ ಬರುವವರಿದ್ದರು. ಆದರೆ ಹೃದ್ರೋಗ ಸಮಸ್ಯೆಯಿಂದಾಗಿ ಕೊನೆಯ ಕ್ಷಣದಲ್ಲಿ ಆಗಮಿಸಿರಲಿಲ್ಲ. ಮದುವೆಯಾದ ನಂತರ ತನ್ನ ಮೇಲೆ ಮಗಳು ಮೇಘನ ದೂರ ತಳ್ಳುತ್ತಿದ್ದಾಳೆ ಎಂದು ಟಿವಿ ಚಾನೆಲ್ ವೊಂದಕ್ಕೆ ಸಂದರ್ಶನದ ವೇಳೆ ಆರೋಪಿಸಿದ್ದರು. ಬ್ರಿಟನ್ ರಾಜಮನೆತನಕ್ಕೆ ಬಂದ ನಂತರ ತಂದೆ-ಮಗಳ ಸಂಬಂಧ ಹಳಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com