ಕಿಮ್ ಜಾಂಗ್ ಉನ್ ಆರೋಗ್ಯವಾಗಿ ವಾಪಸ್ ಬಂದಿರುವುದು ಸಂತೋಷವಾಗಿದೆ:ಡೊನಾಲ್ಡ್ ಟ್ರಂಪ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯವಾಗಿ ಮತ್ತೆ ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿದ್ದು ಸಂತೋಷದ ವಿಚಾರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಾರ್ಖಾನೆ ಉದ್ಘಾಟಿಸಿದ ಕಿಮ್ ಜಾಂಗ್ ಉನ್
ಕಾರ್ಖಾನೆ ಉದ್ಘಾಟಿಸಿದ ಕಿಮ್ ಜಾಂಗ್ ಉನ್

ವಾಷಿಂಗ್ಟನ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯವಾಗಿ ಮತ್ತೆ ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿದ್ದು ಸಂತೋಷದ ವಿಚಾರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಿಮ್ ಜಾಂಗ್ ಉನ್ ಆರೋಗ್ಯವಾಗಿ ಮತ್ತೆ ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿದ್ದು ಖುಷಿಯ ಸಂಗತಿ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಸುಮಾರು ಮೂರು ವಾರಗಳಿಂದ ಜನರಿಂದ ಕಣ್ಮರೆಯಾಗಿದ್ದ ಕಿಮ್ ಜಾಂಗ್ ಉನ್ ಮೊನ್ನೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರು. ಅವರ ಕಣ್ಮರೆ ಬಗ್ಗೆ ಇಷ್ಟು ದಿನ ಹಲವು ಊಹಾಪೋಹಗಳು ಕೇಳಿಬಂದಿದ್ದವು.

ಮೊನ್ನೆ ಶುಕ್ರವಾರ ಉತ್ತರ ಕೊರಿಯಾದ ಪ್ಯೊಗ್ಯಾಂಗ್ ನ ಸುಂಚೊನ್ ನಲ್ಲಿ ಕೀಟನಾಶಕ ಕಾರ್ಖಾನೆ ಉದ್ಘಾಟನೆ ವೇಳೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ನಡೆಯುವುದು, ಜನರತ್ತ ನೋಡಿ ನಗುವುದು ಮತ್ತು ಸಿಗರೇಟು ಎಳೆಯುವುದನ್ನು ಅಲ್ಲಿನ ಟಿವಿ ಚಾನೆಲ್ ಪ್ರಸಾರ ಮಾಡಿತ್ತು.

ಕಳೆದ ಏಪ್ರಿಲ್ 15ರಂದು ತನ್ನ ತಾತ ಉತ್ತರ ಕೊರಿಯಾ ಸ್ಥಾಪಕ ಕಿಮ್ ಇಲ್ ಸುಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿದ್ದಾಗ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com