ಪಾಕಿಸ್ತಾನದಲ್ಲಿ 503 ವೈದ್ಯಕೀಯ ಸಿಬ್ಬಂದಿ, 40 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್

ಮಹಾಮಾರಿ ಕೊರೋನಾ ವೈರಸ್ ಪಾಕಿಸ್ತಾನದಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು 500 ವೈದ್ಯಕೀಯ ಸಿಬ್ಬಂದಿ ಮತ್ತು 40 ಪತ್ರಕರ್ತರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ಲಾಹೋರ್: ಮಹಾಮಾರಿ ಕೊರೋನಾ ವೈರಸ್ ಪಾಕಿಸ್ತಾನದಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು 500 ವೈದ್ಯಕೀಯ ಸಿಬ್ಬಂದಿ ಮತ್ತು 40 ಪತ್ರಕರ್ತರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಪಾಕಿಸ್ತಾನ ಸರ್ಕಾರದ ವರದಿಯ ಪ್ರಕಾರ, 250 ವೈದ್ಯರು ಹಾಗೂ 110 ನರ್ಸ್ ಗಳು ಸೇರಿದಂತೆ 503 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕೊವಿಡ್-19 ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.

ಇದುವರೆಗೆ ಐವರು ವೈದ್ಯರು ಸೇರಿದಂತೆ 13 ವೈದ್ಯಕೀಯ ಸಿಬ್ಬಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಪಾಕ್ ಸರ್ಕಾರ ತಮಗೆ ಸೂಕ್ತ ಪಿಪಿಇ ಕಿಟ್ ನೀಡುತ್ತಿಲ್ಲ ಎಂದು ಹಲವು ವೈದ್ಯರು ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ 20,084ಕ್ಕೆ ಏರಿಕೆಯಾಗಿದ್ದು, ಮಹಾಮಾರಿಯಿಂದ ಸಾವನ್ನಪ್ಪಿದವರ ಸಂಖ್ಯೆ 457ಕ್ಕೆ ಏರಿಕೆಯಾಗಿದೆ.

ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ 7,494, ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 7,465, ವಾಯುವ್ಯ ಖೈಬರ್ ಪಖ್ತುನ್ ಖವಾ, ನೈರುತ್ಯ ಬಲೂಚಿಸ್ತಾನದಲ್ಲಿ 1,172 ಪ್ರಕರಣಗಳು, ಪಾಕ್ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 393 ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com