ಭಾರತೀಯ ಸೇಲ್ಸ್ ಮನ್ ಗೆ 10 ಮಿಲಿಯನ್ ದಿರ್ಹಾಮ್ಸ್ ಲಾಟರಿ!

ಭಾರತೀಯ ಸೇಲ್ಸ್ ಮನ್ ಓರ್ವ ದುಬೈ ನಲ್ಲಿ 10 ಮಿಲಿಯನ್ ದಿರ್ಹಾಮ್ಸ್ ಲಾಟರಿ ಗೆದ್ದಿದ್ದಾರೆ.
ಭಾರತೀಯ ಸೇಲ್ಸ್ ಮನ್ ಗೆ 10 ಮಿಲಿಯನ್ ದಿರ್ಹಾಮ್ಸ್ ಲಾಟರಿ!
ಭಾರತೀಯ ಸೇಲ್ಸ್ ಮನ್ ಗೆ 10 ಮಿಲಿಯನ್ ದಿರ್ಹಾಮ್ಸ್ ಲಾಟರಿ!

ದುಬೈ: ಭಾರತೀಯ ಸೇಲ್ಸ್ ಮನ್ ಓರ್ವ ದುಬೈ ನಲ್ಲಿ 10 ಮಿಲಿಯನ್ ದಿರ್ಹಾಮ್ಸ್ ಲಾಟರಿ ಗೆದ್ದಿದ್ದಾರೆ. 

ಕೇರಳದ ತ್ರಿಶೂರ್ ಮೂಲದ ದಿಲೀಪ್ ಕುಮಾರ್ ಎಲ್ಲಿಕ್ಕೊಟ್ಟಿಲ್ ಪರಮೇಶ್ವರನ್ ಲಾಟರಿ ಗೆದ್ದಿರುವ ಅದೃಷ್ಟಶಾಲಿ. ಬಿಡಿಭಾಗಗಳನ್ನು ಮಾರಾಟ ಮಾಡುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ 5,000 ದಿರ್ಹಾಮ್ಸ್ (1,361) ವೇತನ ಪಡೆಯುತ್ತಿದ್ದಾರೆ.

ಅಬುಧಾಬಿಯ ಬಿಗ್ ಟಿಕೆಟ್ ಡ್ರಾನಲ್ಲಿ 10 ಮಿಲಿಯನ್ ಧಿರ್ಹಾಮ್ಸ್ (ಯುಎಸ್ ಡಿ 2.7 ಮಿಲಿಯನ್) ಬಹುಮಾನ ಗೆದ್ದಿದ್ದು, ಈ ಪೈಕಿ ಬಹುಪಾಲು ಹಣ ಅಂದರೆ 700,000 ದಿರ್ಹಾಮ್ಸ್ ನ್ನು ಸಾಲ ಮರುಪಾವತಿಗೆ ಬಳಕೆ ಮಾಡಲಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಉಳಿದ ಮೊತ್ತದಲ್ಲಿ ಒಂದಷ್ಟು ಹಣವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡುವುದಾಗಿ 17 ವರ್ಷದಿಂದ ಯುಎಇಯಲ್ಲಿರುವ ಪರಮೇಶ್ವರನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com