ಕರ್ನಾಟಕ: 50 ದಿನಗಳ ನಂತರ ಹುಬ್ಬಳ್ಳಿ ಟೆಕ್ಕಿಯ ಶವ ಲಂಡನ್ ನಿಂದ ಕುಟುಂಬಕ್ಕೆ ಹಸ್ತಾಂತರದ ನಿರೀಕ್ಷೆ 

ಲಂಡನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿಯ ಶವ 50 ದಿನಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರವಾಗುವ ನಿರೀಕ್ಷೆ ಇದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಲಂಡನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿಯ ಶವ 50 ದಿನಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರವಾಗುವ ನಿರೀಕ್ಷೆ ಇದೆ. 

ಕೇಂದ್ರ ಸರ್ಕಾರ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಕಾರ್ಯಾಚರಣೆ ನಡೆಸಲು ತೀರ್ಮಾನಿಸಿರುವುದು ಮೃತ ಟೆಕ್ಕಿಯ ಕುಟುಂಬ ಸದಸ್ಯರಿಗೆ ಆಶಾಕಿರಣವಾಗಿದ್ದು, 50 ದಿನಗಳ ಬಳಿಕವಾದರೂ ಮಗನ ಪಾರ್ಥಿವ ಶರೀರದ ದರ್ಶನಕ್ಕೆ ಪೋಷಕರು ಎದುರುನೋಡುತ್ತಿದ್ದಾರೆ. 

ಮೃತ ಟೆಕ್ಕಿಯ ಪತ್ನಿ, ಮಗು, ಪತ್ನಿಯ ಸಹೋದರ ಲಂಡನ್ ನಲ್ಲಿಯೇ ಇದ್ದಾರೆ. ಇತ್ತ ಪೋಷಕರು ಹುಬ್ಬಳ್ಳಿಯಲ್ಲಿ ಪುತ್ರನ ಪಾರ್ಥಿವ ಶರೀರಕ್ಕಾಗಿ ಎದುರು ನೋಡುತ್ತಿದ್ದಾರೆ. ಟೆಕ್ಕಿ ಮಾ.13, 2020 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿಯ ಅಂತ್ಯ ಸಂಸ್ಕಾರ ಹುಬ್ಬಳ್ಳಿಯಲ್ಲೇ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ. ಬ್ರಿಟನ್ ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಟೆಕ್ಕಿಯ ಪಾರ್ಥಿವ ಶರೀರ ಭಾರತಕ್ಕೆ ತರಲು ಸಾಧ್ಯವಾಗಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com