ಅಮೆರಿಕಾ: ಇವಾಂಕ ಟ್ರಂಪ್ ಆಪ್ತ ಸಹಾಯಕಿಗೆ ಕೋವಿಡ್-19 ಪಾಸಿಟಿವ್!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಅವರ ಆಪ್ತ ಸಹಾಯಕಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ
ಇವಾಂಕ ಟ್ರಂಪ್
ಇವಾಂಕ ಟ್ರಂಪ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಅವರ ಆಪ್ತ ಸಹಾಯಕಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಕೋವಿಡ್-19 ಸೋಂಕಿಗೆ ತುತ್ತಾದ ಶ್ವೇತಭವನದ ಮೂರನೇ ಸಿಬ್ಬಂದಿಯಾಗಿದ್ದಾರೆ ಎಂದು ಮಾಧ್ಯಮವೊಂದು ಇಂದು ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಪುತ್ರಿಯ ವೈಯಕ್ತಿಕ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಈ ಸಿಬ್ಬದಿ ಹಲವು ವಾರಗಳಿಂದ ಕಾಣಿಸುತ್ತಿರಲಿಲ್ಲ ಎಂದು ಸಿಎನ್ ಎನ್ ವರದಿ ಮಾಡಿದೆ. 

ಸುಮಾರು ಎರಡು ವಾರಗಳಿಂದಲೂ ಆಕೆ ಟೆಲಿ ವರ್ಕಿಂಗ್ ಮಾಡುತ್ತಿದ್ದು, ಕೋವಿಡ್-19 ಸೋಂಕಿನ ಪರೀಕ್ಷೆಯಿಂದಾಗಿ ಎಚ್ಚರಿಕೆ ವಹಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. 

ಇವಾಂಕ ಆಪ್ತ ಸಹಾಯಕಿಗೆ ರೋಗ ಲಕ್ಷಣಗಳು ಕಂಡುಬಂದಿರಲಿಲ್ಲ. ಇವಾಂಕ ಮತ್ತು ಅವರ ಪತಿ ಜೇರೆಡ್ ಕುಶ್ನರ್ ಇಬ್ಬರ ಪರೀಕ್ಷೆಯಲ್ಲೂ ಶುಕ್ರವಾರ ನೆಗೆಟಿವ್ ಬಂದಿದೆ ಎಂದು ಅವರಿಗೆ ಆಪ್ತರಾದ ವ್ಯಕ್ತಿಯೊಬ್ಬರು ಅಮೆರಿಕಾದ  ಸುದ್ದಿವಾಹಿನಿಗೆ ತಿಳಿಸಿದ್ದಾರೆ. 

ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಪತ್ರಿಕಾ ಕಾರ್ಯದರ್ಶಿ ಕೇಟೀ ಮಿಲ್ಲರ್ ಅವರಿಗೆ ಕೋವಿಡ್ -19 ಪಾಸಿಟಿವ್ ಇರುವುದನ್ನು ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com