ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ: ಶ್ವೇತ ಭವನದಲ್ಲಿ ಇದು ಎರಡನೇ ಕೇಸು!

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.
ಅಮೆರಿಕ ಶ್ವೇತಭವನ
ಅಮೆರಿಕ ಶ್ವೇತಭವನ

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.

ಮೈಕ್ ಪೆನ್ಸ್ ಅವರ ಸಹವರ್ತಿ ಯಾರು ಕೊರೋನಾ ವೈರಸ್  ಸೋಂಕಿಗೆ ಒಳಗಾಗಿದ್ದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಶ್ವೇತಭವನದಲ್ಲಿ ಕೊರೋನಾ ಹರಡುತ್ತಿರುವುದು ತಮಗೆ ಆತಂಕ ತಂದಿಲ್ಲ ಎಂದಿದ್ದಾರೆ.

ಶ್ವೇತಭವನದ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.ನಿನ್ನೆ ಕೊರೋನಾ ಸೋಂಕು ಪತ್ತೆಯಾದ ಮೈಕ್ ಪೆನ್ಸ್ ಅವರ ಮಾಧ್ಯಮ ವಕ್ತಾರೆ ಕೇಟೀ ಮಿಲ್ಲರ್ ಇತ್ತೀಚೆಗೆ ಮೈಕ್ ಪೆನ್ಸ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿರಲಿಲ್ಲ.

ಟ್ರಂಪ್ ಅವರಿಗೆ ಉನ್ನತ ಮಟ್ಟದ ಸಲಹೆಗಾರರಾಗಿರುವ ಸ್ಟೆಫನ್ ಮಿಲ್ಲರ್ ಅವರ ಪತ್ನಿಯಾಗಿರುವ ಕೇಟೀ, ಈ ಸಂದರ್ಭದಲ್ಲಿ ಸ್ಟೆಫನ್ ಅವರಿಗೆ ಕೂಡ ಕೊರೋನಾ ಸೋಂಕು ತಗಲಿದೆಯೇ, ಅವರು ಕೂಡ ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com