ಕೊರೋನಾ ಗೆದ್ದ 99 ವರ್ಷದ ವೃದ್ಧೆ!

99 ವರ್ಷದ ವೃದ್ಧೆ ಕೊರೊನವೈರಸ್‍ ನಿಂದ ಚೇತರಿಸಿಕೊಂಡು ಜೆರುಸಲೇಮ್‍ನ ಶಾರೆ ಜೆಡೆಕ್‍ ವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಮ್‍: ಇಸ್ರೇಲ್‍ನಲ್ಲಿ 99 ವರ್ಷದ ವೃದ್ಧೆ ಕೊರೊನವೈರಸ್‍ ನಿಂದ ಚೇತರಿಸಿಕೊಂಡು ಜೆರುಸಲೇಮ್‍ನ ಶಾರೆ ಜೆಡೆಕ್‍ ವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
 
ಇಟ್ಜಿಂಗೆರ್ ಎಂಬ ವೃದ್ಧ ರೋಗಿ ಮತ್ತು ಆಕೆಯ ಪತಿ ಹರ್ಷೆಲ್‍ ಒಂದು ವರ್ಷದ ಹಿಂದೆ ಅಮೆರಿಕದಿಂದ ಇಸ್ರೇಲ್‍ಗೆ ವಲಸೆ ಬಂದು ನೆಲೆಸಿದ್ದರು.

ಕಳೆದ ಏಪ್ರಿಲ್‍ ಮಧ್ಯಭಾಗದಲ್ಲಿ ಜೆರುಸಲೇಮ್‍ ನ ನರ್ಸಿಂಗ್‍ ಹೋಮ್‍ ನಲ್ಲಿ ಪರೀಕ್ಷೆ ನಡೆಸಿದಾಗ ದಂಪತಿಯರಿಬ್ಬರಿಗೂ ಕೊರೊನವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ವೃದ್ಧೆಯ 96 ವರ್ಷದ ಪತಿಯ ಆರೋಗ್ಯ ಸ್ಥಿತಿ ಗಂಭೀರವಾಗಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. 
ಆದರೂ ವೃದ್ಧೆ ಕೆಲ ಇತರ ಕಾಯಿಲೆಗಳ ಹೊರತಾಗಿಯೂ ಕೊರೊನವೈರಸ್‍ ನಿಂದ ಚೇತರಿಸಿಕೊಂಡಿದ್ದಾರೆ.

ಇಸ್ರೇಲ್‍ನಲ್ಲಿ ಇದುವರೆಗೆ ದೃಢಪಟ್ಟ ಒಟ್ಟು 16,492 ಪ್ರಕರಣಗಳ ಪೈಕಿ 11, 548 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com