ಕುವೈತ್ ನಲ್ಲಿ ಭಾರತೀಯ ಮೂಲದ ವೈದ್ಯ ಕೊರೋನಾ ಗೆ ಬಲಿ

ಭಾರತೀಯ ಮೂಲದ ದಂತವೈದ್ಯ ಕುವೈತ್ ನಲ್ಲಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.  54 ವರ್ಷದ ವಾಸುದೇವ ರಾವ್ ಕುವೈತ್ ಜಾಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕುವೈತ್: ಭಾರತೀಯ ಮೂಲದ ದಂತವೈದ್ಯ ಕುವೈತ್ ನಲ್ಲಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. 

54 ವರ್ಷದ ವಾಸುದೇವ ರಾವ್ ಕುವೈತ್ ಜಾಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ಅಲ್ಲಿನ ಮಾಧ್ಮಗಳು ವರದಿ ಮಾಡಿವೆ.

ಕಳೆದ 15 ವರ್ಷದಿಂದ ರಾವ್ ಕುವೈತ್ ನಲ್ಲಿ ವಾಸವಾಗಿದ್ದರು. ಭಾರತೀಯ ದಂತ ವೈದ್ಯ ಸಂಘದ ಸದಸ್ಯರು ಆಗಿದ್ದ ವಾಸುದೇವ ರಾವ್ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ವಂದೇ ಮಾತರಂ ಮಿಷನ್ ಅಡಿ 171 ಮಂದಿ ಭಾರತೀಯರನ್ನು ಕುವೈತ್ ನಿಂದ ಚೆನ್ನೈಗೆ ಕರೆ ತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com