ರಷ್ಯಾ: ಸೇಂಟ್ ಪೀಟರ್ಸ್ ಬರ್ಗ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ, ಐವರು ಕೊರೋನಾ ಸೋಂಕಿತರು ಮೃತ್ಯು

ಸೇಂಟ್ ಪೀಟರ್ಸ್ಬರ್ಗ್ ನ  ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಐವರು ಕೊರೋನಾವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ನಿಗಾ ಅಧಿಕಾರಿಗಳು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಸೇಂಟ್ ಪೀಟರ್ಸ್ಬರ್ಗ್ ನ  ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ವೆಂಟಿಲೇಟರ್ ಗಳಲ್ಲಿದ್ದ ಐವರು ಕೊರೋನಾವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ನಿಗಾ ಅಧಿಕಾರಿಗಳು ಹೇಳಿದ್ದಾರೆ.

ಸ್ಟೇಟ್ ಟಾಸ್ ನ್ಯೂ ಏಜನ್ಸಿ ಜತೆಗೆ ಮಾತನಾಡಿದ ತುರ್ತು ನಿಗಾ ಅಧಿಕಾರಿಗಳು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಧ ಘಂಟೆಯೊಳಗೆ  ನಿಯಂತ್ರಿಸಲಾಗಿತ್ತು ಎಂದರು.

ದೋಷಯುಕ್ತ ವೆಂಟಿಲೇಟರ್‌ನಿಂದ ಇದು ಸಂಭವಿಸಿರಬಹುದು  ಎಂದು ಶಂಕಿಸಲಾಗಿದ್ದು ಸಧ್ಯ ಪೊಲೀಸರು ಬೆಂಕಿ ಅನಾಹುತದ ಮೂಲದ ಕುರಿತು ತನಿಖೆ ನಡೆಸಿದ್ದಾರೆ.

ಇನ್ನು ರಷ್ಯಾದಲ್ಲಿ ಕೊರೋನಾವೈರಸ್ ರೋಗಿಗಳಿರುವ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಲುತ್ತಿರುವುದು ಇದು ಮೊದಲಲ್ಲ. ಇದಕ್ಕೆ ಮುನ್ನ  ಶನಿವಾರ, ಮಾಸ್ಕೋದ ಸ್ಪಾಸೊಕುಕೋಟ್ಸ್ಕಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓರ್ವ ರೋಗಿ ಸಾವಿಗೀಡಾಗಿದ್ದನು.

ರಷ್ಯಾವು 220,000 ಕ್ಕಿಂತಲೂ ಹೆಚ್ಚು ಕೊರೋನಾವೈರಸ್ ಸೋಂಕಿತರನ್ನು ಹೊಂದಿದೆ.  2,009 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com