2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ

ಚೈನಾದಿಂದ ಕಳೆದ 20 ವರ್ಷಗಳಲ್ಲಿ ಐದು ಅಂಟು ವ್ಯಾಧಿಗಳು ಪಸರಿಸಿ ವಿಶ್ವವನ್ನು ಭಯಭೀತಗೊಳಿಸಿವೆ. ಇನ್ನೂ ಮುಂದೆ ಈ ರೀತಿ ಆಗದಂತೆ ಸೂಕ್ತ ತಡೆ ವಿಧಿಸಬೇಕು ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಗೆಗಾರ ರಾಬರ್ಟ್ ಓ ಬ್ರೈನ್ ತಿಳಿಸಿದ್ದಾರೆ.
2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ
2 ದಶಕದಲ್ಲಿ ಚೈನಾದಿಂದ 5 ಅಂಟು ವ್ಯಾಧಿಗಳು ಪ್ರಸರಣ: ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ

ವಾಷಿಂಗ್ಟನ್: ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್ ಚೈನಾದ ವುಹಾನ್ ನಗರದಲ್ಲಿ ಜನಿಸಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಕೊರೊನಾ ಸೋಂಕಿನಿಂದಾಗಿ ವಿಶ್ವಾದ್ಯಂತ ಈವರೆಗೆ 2.5 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಚೈನಾದಿಂದ ಕಳೆದ 20 ವರ್ಷಗಳಲ್ಲಿ ಐದು ಅಂಟು ವ್ಯಾಧಿಗಳು ಪಸರಿಸಿ ವಿಶ್ವವನ್ನು ಭಯಭೀತಗೊಳಿಸಿವೆ. ಇನ್ನೂ ಮುಂದೆ ಈ ರೀತಿ ಆಗದಂತೆ ಸೂಕ್ತ ತಡೆ ವಿಧಿಸಬೇಕು ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಗೆಗಾರ ರಾಬರ್ಟ್ ಓ ಬ್ರೈನ್ ತಿಳಿಸಿದ್ದಾರೆ.

ಚೈನಾದ ಕಾಯಿಲೆಗಳನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಜಗತ್ತಿನ ದೇಶಗಳು ಚೈನಾ ದೇಶಕ್ಕೆ ಕಠಿಣವಾಗಿ ತಿಳಿ ಹೇಳಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಕೋವಿಡ್ -19 ವೈರಾಣು ಚೈನಾದ ವುಹಾನ್‌ ನಗರದಲ್ಲಿ ಜನಿಸಿದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲ ಈ ವೈರಾಣು ಪ್ರಯೋಗಾಲಯವೊಂದರಿಂದ ಹೊರಬಂದಿರುವುದಕ್ಕೆ ಕೂಡಾ ಅನೇಕ ಸಾಕ್ಷ್ಯಗಳು ನಮ್ಮ ಬಳಿ ಇವೆ ಎಂದು ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಚೈನಾ ಸರ್ಕಾರಕ್ಕೆ ಸಹಾಯ ಮಾಡಲು ಅಮೆರಿಕಾ ಆರೋಗ್ಯ ವೃತ್ತಿಪರರು ಮುಂದಾಗಿದ್ದರೂ... ಚೈನಾ ಈ ನೆರವು ಸ್ವೀಕರಿಸಲು ನಿರಾಕರಿಸಿದೆ. ಚೀನಾದಿಂದ ಪಸರಿಸುತ್ತಿರುವ ರೋಗಗಳು ಅಮೆರಿಕಾ ಸೇರಿ ಇಡೀ ಪ್ರಪಂಚವನ್ನೇ ನಡುಗಿಸುತ್ತಿವೆ. ಸಾರ್ವಜನಿಕ ಆರೋಗ್ಯದ ಬಗ್ಗೆ ಚೈನಾ ಸ್ವಲ್ಪ ಯೋಚಿಸಬೇಕು. ಕೊರೊನಾ ಮೂಲಗಳ ಬಗ್ಗೆ ಅಮೆರಿಕಾ ಸರ್ಕಾರ ಮತ್ತಷ್ಟು ಪರಾಮರ್ಶೆ ನಡೆಸಲಿದೆ ಎಂದು ರಾಬರ್ಟ್ ಎಚ್ಚರಿಸಿದ್ದಾರೆ. ಚೈನಾದ ಕಾರಣದಿಂದಾಗಿ ಜಾಗತಿಕ ಹಣಕಾಸು ವಲಯ ಸ್ಥಗಿತಗೊಳ್ಳುತ್ತಿರುವುದು ಇದು ಐದನೇ ಬಾರಿ. ಇದನ್ನು ತಡೆಯಲು ಚೈನಾ ಕ್ಕೆ ಯಾರಾದರೂ ಸಹಾಯ ಮಾಡಬೇಕಾಗಿದೆ. ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ರಾಬರ್ಟ್ ಹೇಳಿದ್ದಾರೆ. ಇಂತಹ ರೋಗಗಳು ಮರುಕಳಿಸದಂತೆ ಅಮೆರಿಕಾ ಚೀನಾಕ್ಕೆ ಸಹಾಯ ಮಾಡಲು ಸಿದ್ದ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com