ಕೊರೋನಾ ಸಾಂಕ್ರಾಮಿಕ: ಶಾಶ್ವತವಾಗಿ 'ಮನೆಯಿಂದಲೇ ಕೆಲಸ' ಮಾಡಿ ಎಂದ ಟ್ವಿಟರ್!

ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕು ಕಡಿಮೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಿರುವ ಆತಂಕದ ನಡುವೆಯೇ ತನ್ನ ಸಿಬ್ಬಂದಿಗಳ ಸುರಕ್ಷತೆಗೆ ಮುಂದಾಗಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಶಾಶ್ವತವಾಗಿ 'ಮನೆಯಿಂದಲೇ ಕೆಲಸ'  ಮಾಡುವಂತೆ ಸಿಬ್ಬಂದಿಗಳಿಗೆ ಅನುಮತಿ ನೀಡಿದೆ.
ಟ್ವಿಟರ್ (ಸಂಗ್ರಹ ಚಿತ್ರ)
ಟ್ವಿಟರ್ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕು ಕಡಿಮೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತಿರುವ ಆತಂಕದ ನಡುವೆಯೇ ತನ್ನ ಸಿಬ್ಬಂದಿಗಳ ಸುರಕ್ಷತೆಗೆ ಮುಂದಾಗಿರುವ ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಶಾಶ್ವತವಾಗಿ 'ಮನೆಯಿಂದಲೇ ಕೆಲಸ'  ಮಾಡುವಂತೆ ಸಿಬ್ಬಂದಿಗಳಿಗೆ ಅನುಮತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್ ವಕ್ತಾರರು, ಮುಂಬರುವ ಸೆಪ್ಟೆಂಬರ್ ನಿಂದಲೇ ನಾವು ಕಚೇರಿ ತೆರೆಯಲು ಸಿದ್ಧರಿದ್ದೇವೆ. ಆದರೆ ಕೊರೋನಾ ಸಾಂಕ್ರಾಮಿಕ ಪ್ರಸರಣ ತಗ್ಗದ ಹೊರತು ಅದು ಸಾಧ್ಯವಿಲ್ಲ. ಅಲ್ಲದೆ ಕೊರೋನಾ ಸದ್ಯಕ್ಕೆ ತಗ್ಗುವ ಯಾವುದೇ ಲಕ್ಷಣಗಳೂ  ಗೋಚರಿಸುತ್ತಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿಗಳಿಗೆ ನಾವು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಂ ಹೋಮ್) ಅನುಮತಿ ನೀಡಿದ್ದೇವೆ. ಕೊರೋನಾ ಲಾಕ್ ಡೌನ್ ಮುಕ್ತಾಯದ ಬಳಿಕವೂ ಅವರು ಮನೆಯಿಂದಲೇ ಕಾರ್ಯ ನಿರ್ವಹಿಸಬಹುದು. ಸಿಬ್ಬಂದಿಗಳ  ಸುರಕ್ಷತೆಯೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.

ಅಂತೆಯೇ ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಟೆಲಿ ವರ್ಕ್ (ವಿಡಿಯೋ ಕಾನ್ಫರೆನ್ಸ್)ಗೆ ಚಾಲನೆ ನೀಡಿದ್ದೆವು. ಅದು ಈಗಲೂ ಮುಂದುವರೆಯುತ್ತಿದೆ. ಲಾಕ್ ಡೌನ್ ಮುಕ್ತಾಯದ ಮೇಲೂ ಕಚೇರಿಗೇ ಬಂದು ಕಾರ್ಯ ನಿರ್ವಹಿಸುವಂತೆ ನಾವು ಒತ್ತಡ ಹೇರುವುದಿಲ್ಲ. ಕಚೇರಿಗೆ ಯಾವಾಗ  ಬರಬೇಕು ಎಂಬ ವಿಚಾರ ಸಿಬ್ಬಂದಿಗಳಿಗೇ ಬಿಟ್ಟದ್ದು. ತಾವಿರುವ ಸ್ಥಳದಿಂದಲೇ ಕೆಲಸ ಮಾಡಬಹುದು. ಕಳೆದ ಕೆಲ ತಿಂಗಳುಗಳಿಂದ ನಾವು ಇದನ್ನು ಮಾಡಿ ತೋರಿಸಿದ್ದೇವೆ. ಯಾವುದೇ ಸ್ಥಳದಿಂದ ಬೇಕಾದರೂ ನಾವು ಕೆಲಸ ಮಾಡಬಹುದು. ಹೀಗಾಗಿ ನಮ್ಮ ಸಿಬ್ಬಂದಿಗಳು  ಮನೆಯಿಂದಲೇ ಅಥವಾ ತಾವಿರುವ ಸ್ಥಳದಿಂದಲೇ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದ್ದಾರೆ.

ಕಚೇರಿಯ ಪುನಾರಂಭ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಕೊರೋನಾ ಸಾಂಕ್ರಾಮಿಕ ದಂತಹ ಈ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಪರಿಸ್ಥಿತಿ ಯಾವಾಗ ಸಹಕರಿಸುತ್ತದೆಯೋ ಆಗ ನಮ್ಮ ಕಚೇರಿಗಳನ್ನು ತೆರೆಯಲಾಗುತ್ತದೆ. ಕಚೇರಿ ಪುನಃ ತೆರೆಯುವುದು  ನಮ್ಮ ಆಧ್ಯತೆಯಾಗಿದೆಯಾದರೂ, ಸಿಬ್ಬಂದಿಗಳ ಸುರಕ್ಷತೆ ಕೂಡ ನಮಗೆ ಅಷ್ಟೇ ಮುಖ್ಯ. ಕಚೇರಿ ಯಾವಾಗ ಬರಬೇಕು ಎಂದು ಅವರು ನಿರ್ಧರಿಸುತ್ತಾರೆಯೋ ಆಗಲೇ ಬರಬಹುದು. ಪ್ರಸ್ತುತ ಸೆಪ್ಟೆಂಬರ್ ವರೆಗೂ ಕಚೇರಿಯ ತೆರೆಯದಂತೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com