ಮುಸ್ಲಿಂ ಸಮುದಾಯದ ಮಾನವ ಹಕ್ಕುಗಳ ಉಲ್ಲಂಘನೆ: ಚೀನಾವನ್ನು ಹೊಣೆ ಮಾಡುವ ಮಸೂದೆ ಅಂಗೀಕರಿಸಿದ ಅಮೆರಿಕ

ಚೀನಾದಲ್ಲಿ ಯುಗುರ್ಸ್ ಮತ್ತು ಇತರ ಮುಸ್ಲೀಂ ಸಮುದಾಯ ಗುಂಪುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಹೊಣೆಯಾಗಿ ಮಾಡುವ ಮಸೂದೆಯನ್ನು ಅಮೆರಿಕ ಸಂಸತ್‍ ಶುಕ್ರವಾರ ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್‍ : ಚೀನಾದಲ್ಲಿ ಯುಗುರ್ಸ್ ಮತ್ತು ಇತರ ಮುಸ್ಲೀಂ ಸಮುದಾಯ ಗುಂಪುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಹೊಣೆಯಾಗಿ ಮಾಡುವ ಮಸೂದೆಯನ್ನು ಅಮೆರಿಕ ಸಂಸತ್‍ ಶುಕ್ರವಾರ ಅಂಗೀಕರಿಸಿದೆ.

ಈ ಕ್ರಮವನ್ನು ಸರ್ವಾನುಮತದಿಂದ ಸೆನೆಟ್‍ ಅಂಗೀಕರಿಸಿದ್ದು, ಇದನ್ನು ಅಂಗೀಕಾರಕ್ಕೆ ಹೌಸ್‍ ಆಫ್‍ ರೆಪ್ರಸೆಂಟಿಟೀವ್ಸ್‍ ಗೆ ಕಳುಹಿಸಲಾಗುತ್ತದೆ. 

ಚೀನಾ ನಗರವಾದ ಕ್ಸಿನ್‍ಜಿಯಾಂಗ್‍ ನಲ್ಲಿ ಅಲ್ಪಸಂಖ್ಯಾತ ಟರ್ಕಿ ಮುಸ್ಲೀಮರ ಮಾನವಹಕ್ಕುಗಳು ಉಲ್ಲಂಘನೆಯಾಗುತ್ತಿರುವುದಕ್ಕೆ ಸೆನೆಟ್‍ ತೀವ್ರವಾಗಿ ಖಂಡಿಸಿದ್ದು, ಚೀನಾದ ಒಳಗೆ ಮತ್ತು ಹೊರಗೆ ಈ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಬಂಧನವನ್ನು ಕೊನೆಗಾಣಿಸಬೇಕು ಎಂದು ಸೆನೆಟ್‍ ಚೀನಾವನ್ನು ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com