ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ಘೋಷಿಸಿದ ವಿಶ್ವಬ್ಯಾಂಕ್

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಉಂಟಾಗಿರುವ ಸಂಕಷ್ಟಕ್ಕೆ ಸಹಾಯವಾಗಿ ವಿಶ್ವ ಬ್ಯಾಂಕ್ ಭಾರತಕ್ಕೆ 1 ಶತಕೋಟಿ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ನ್ನು ಘೋಷಿಸಿದೆ.
ವಿಶ್ವಬ್ಯಾಂಕ್
ವಿಶ್ವಬ್ಯಾಂಕ್

ವಾಷಿಂಗ್ಟನ್:ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಉಂಟಾಗಿರುವ ಸಂಕಷ್ಟಕ್ಕೆ ಸಹಾಯವಾಗಿ ವಿಶ್ವ ಬ್ಯಾಂಕ್ ಭಾರತಕ್ಕೆ 1 ಶತಕೋಟಿ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ನ್ನು ಘೋಷಿಸಿದೆ.

ಈ ಆರ್ಥಿಕ ಪ್ಯಾಕೇಜ್ ಭಾರತ ಸರ್ಕಾರದ ಯೋಜನೆಗಳ ಜೊತೆ ಸಂಪರ್ಕ ಹೊಂದಲಿದೆ. ಇದು ನಗದು ವರ್ಗಾವಣೆ ಮತ್ತು ಜನತೆಗೆ ಆಹಾರ ಒದಗಿಸುವ ಯೋಜನೆಗಳಿಗೆ ಸಹಾಯ ಮಾಡುತ್ತದೆ. ಭಾರತದ ದುರ್ಬಲ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಇದರಿಂದ ಸಹಾಯವಾಗಲಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಭಾರತದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ 81 ಸಾವಿರದ 970ಕ್ಕೆ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 3,967 ಹೊಸ ಪ್ರಕರಣಗಳು ಮತ್ತು 100 ಸಾವು ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com