ಮಾರಕ ಕೊರೋನಾ ಗೆದ್ದ 113 ವರ್ಷದ ಸ್ಪಾನಿಷ್ ಮಹಿಳೆ!

ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಹಿರಿಯ ನಾಗರಿಕರೇ ಹೆಚ್ಚಾಗಿ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ 113 ವರ್ಷದ ಮಹಿಳೆಯೊಬ್ಬರು ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದಾರೆ.

Published: 16th May 2020 02:20 PM  |   Last Updated: 16th May 2020 02:51 PM   |  A+A-


Spanish woman-corona virus

ಸಂಗ್ರಹ ಚಿತ್ರ

Posted By : srinivasamurthy
Source : PTI

ಬಾರ್ಸಿಲೋನಾ: ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಹಿರಿಯ ನಾಗರಿಕರೇ ಹೆಚ್ಚಾಗಿ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ 113 ವರ್ಷದ ಮಹಿಳೆಯೊಬ್ಬರು ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದಾರೆ.

ಹೌದು.. ಸ್ಪೈನ್ ಮೂಲದ 113 ವರ್ಷದ ಮಾರಿಯಾ ಬ್ರಾನ್ಯಾಸ್​ ಅವರು ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಆ ಮೂಲಕ ಮಾರಕ ಕೊರೋನಾ ವೈರಸ್ ಗೆದ್ದ ಪ್ರಪಂಚದ ಅತ್ಯಂತ ಹಿರಿಯ ಮಹಿಳೆ ಎಂಬ ಹಿರಿಮೆಗೂ  ಭಾಜನರಾಗಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ಮಾರಿಯಾ ಬ್ರಾನ್ಯಾಸ್​ ಅವರು ಏಪ್ರಿಲ್​ನಲ್ಲಿ ಕೊರೋನಾ ವೈರಸ್​ಗೆ ತುತ್ತಾಗಿದ್ದರು. ಅವರನ್ನು ವೃದ್ಧರ ಆರೈಕೆ ಕೇಂದ್ರದ ಕೊಠಡಿಯಲ್ಲಿ ಐಸೋಲೆಷನ್​ ಮಾಡಲಾಗಿತ್ತು. ಮೂಲತಃ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೊ ಮೂಲದವರಾದ ಮಾರಿಯಾ   1918-19ರಲ್ಲಿ ಸ್ಪಾನಿಷ್ ಫ್ಲೂ ಸಾಂಕ್ರಾಮಿಕಕ್ಕೆ ತುತ್ತಾಗಿ ಹಾಗೂ ವಿಶ್ವ ಯುದ್ಧ ಮತ್ತು 1936-1939ರಲ್ಲಿ ನಡೆದ ಸ್ಪಾನಿಷ್ ನಾಗರಿಕ ಯುದ್ಧದಂತಹ ಭೀಕರ ಸನ್ನಿವೇಶದಲ್ಲೂ ಬದುಕುಳಿದಿದ್ದರು.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾರಿಯಾ, ತಾವು ಸಂಪೂರ್ಣ ಆರೋಗ್ಯವಾಗಿದ್ದೇವೆ. ಆದರೆ ಪ್ರತಿಯೊಬ್ಬರಿಗೂ ಇರುವಂತೆ ಅವರು ಕೆಲವು ಸಣ್ಣ-ಪುಟ್ಟ ನೋವುಗಳಿಂದ ಬಳಲುತ್ತಿದ್ದಾರೆ. ತಮ್ಮನ್ನು ಆರೈಕೆ ಮಾಡಿ, ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ  ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ವೃಧ್ಧಾಪ್ಯದಲ್ಲೂ ಮಾರಕ ಕೊರೋನಾ ವೈರಸ್ ಕುರಿತು ತಿಳಿದಿರುವ ಮಾರಿಯಾ ಸ್ಪೇನ್ ನಲ್ಲಿ 27 ಸಾವಿರ ಮಂದಿಯನ್ನು ಬಲಿ ಪಡೆದಿರುವ ಕೊರೋನಾಗೆ ಆದಷ್ಟು ಬೇಗ ಲಸಿಕೆ ಅಥವಾ ಔಷಧಿ ಸಿದ್ಧವಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನು ಮಾರಿಯಾ ಬ್ರಾನ್ಯಾಸ್​ ಸ್ಪೇನ್​ನ ಅತಿ ಹಿರಿಯ ಮಹಿಳೆ ಎಂದು ವೃದ್ಧಾಪ್ಯಶಾಸ್ತ್ರ ಅಧ್ಯಯನ ಸಂಸ್ಥೆ ಗುರುತಿಸಿದೆ. ಈ ಸಂಸ್ಥೆ ನಡೆಸಿದ ನೂರು ವರ್ಷ ಪೂರೈಸಿದವರ ಸೂಪರ್ ಸೆಂಚುರಿಯನ್ಸ್​ ಸಮೀಕ್ಷೆಯಲ್ಲಿ ಬ್ರಾನ್ಯಾಸ್ ಸ್ಪೇನ್​ನ ಅತ್ಯಂತ ಹಿರಿಯ ಮಹಿಳೆ ಎಂಬುದು ತಿಳಿದುಬಂದಿದೆ.

ವೃದ್ಧರ ಮೇಲೆ ಕೊರೋನಾ ವೈರಸ್ ಮಾರಕ ಪರಿಣಾಮ ಬೀರುತ್ತಿದ್ದು, ಈವರೆಗೂ ಕೊರೋನಾ ವೈರಸ್​ನಿಂದ ಮೃತಪಟ್ಟವರಲ್ಲಿ ಬಹುತೇಕರು ವಯೋವೃದ್ಧರೇ ಆಗಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಬ್ರಾನ್ಯಾಸ್ ಕೋವಿಡ್-19ನಿಂದ ಚೇತರಿಸಿಕೊಂಡಿರುವುದು ಗಮನಾರ್ಹವಾಗಿದೆ.  ಇದಕ್ಕೂ ಮುನ್ನ ಸ್ಪಾನಿಷ್​ನ 106 ವರ್ಷದ ಆನಾ ದೆಲ್ ವಾಲೆ ಅವರು ಕೊರೋನಾ ವೈರಸ್​ನಿಂದ ಬದುಕುಳಿದಿದ್ದರು. ಸ್ಪೇನ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿನಿಂದ ಬಳಲುತ್ತಿದ್ದು, ಈವರೆಗೂ 27 ಸಾವಿರ ಜನರು ಮೃತಪಟ್ಟಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp