ಕ್ಸಿ ಜೊತೆಗೆ ಈಗ ಮಾತನಾಡಲ್ಲ, ಮುಂದಿನ ದಿನಗಳಲ್ಲಿ ಏನಾಗಲಿದೆ ಅಂತಾ ನೋಡ್ತಿವಿ: ಟ್ರಂಪ್

ವಿಶ್ವದಾದ್ಯಂತ ಸುಮಾರು 4. 5 ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಹಿನ್ನೆಲೆಯಲ್ಲಿ ಚೀನಾದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ಈಗ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.
ಕ್ಸಿ- ಜಿನ್ ಪಿಂಗ್, ಡೊನಾಲ್ಡ್ ಟ್ರಂಪ್
ಕ್ಸಿ- ಜಿನ್ ಪಿಂಗ್, ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ವಿಶ್ವದಾದ್ಯಂತ ಸುಮಾರು 4.5 ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಹಿನ್ನೆಲೆಯಲ್ಲಿ ಚೀನಾದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ಈಗ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

ಸದ್ಯಕ್ಕೆ ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ,ಮುಂದಿನ ಕೆಲ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ನೋಡುತ್ತೇವೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
 
ಚೀನಾ, ಈ ವರ್ಷದ ಆರಂಭದಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಅಮೆರಿಕದ ವಸ್ತುಗಳನ್ನು ಖರೀದಿಸುತ್ತಿದೆ. ಅವರು ವ್ಯಾಪಾರ ಒಪ್ಪಂದಕ್ಕೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ, ಆದರೆ, ಆ ವ್ಯಾಪಾರ ಒಪ್ಪಂದದಿಂದ ಹೇಗೆ  ನಮ್ಮ ವರ್ಚಸ್ಸು ಕಳೆದುಹೋಯಿತು ಎಂಬುದು ಅರ್ಥವಾಗುತ್ತಿಲ್ಲ, ನೀವು ಅರ್ಥ ಮಾಡಿಕೊಳ್ಳಬಹುದು ಎಂದರು.

ಚೀನಾ ಹೆಚ್ಚಿನ ಪ್ರಮಾಣದ ನಮ್ಮ ಉತ್ಪನ್ನಗಳನ್ನು ಖರೀದಿಸುತ್ತಿದೆ. ಆದರೆ, ಚೀನಾದಿಂದ ಕೊರೋನಾವೈರಸ್ ಬಂದ ನಂತರ ಆ ರಾಷ್ಟ್ರದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದ ತಪ್ಪು ಏನಿಸುತ್ತಿದೆ. ಇದು ನಮ್ಮಗೆ ಸಂತಸವನ್ನುಂಟುಮಾಡಿಲ್ಲ ಎಂದರು.

ಕೊರೋನಾವೈರಸ್ ಚೀನಾದಿಂದ ಬಂದಿದ್ದು, ಅದು ವಿಶ್ವದಾದ್ಯಂತ ಹರಡುವ ಮುನ್ನ ಚೀನಾ ದೇಶವೇ ಅದನ್ನು ನಿಯಂತ್ರಿಸಬೇಕಿತ್ತು. ಹಾಗೆ ಮಾಡದ ಹಿನ್ನೆಲೆಯಲ್ಲಿ ಪ್ರಸ್ತುತ 186 ರಾಷ್ಟ್ರಗಳು ಕೋವಿಡ್-19 ಸೋಂಕಿಗೆ ತುತ್ತಾಗಿವೆ. ರಷ್ಯಾ, ಫ್ರಾನ್ಸ್  ಕೂಡಾ ತೀವ್ರ ರೀತಿಯ ತೊಂದರೆ ಎದುರಿಸುತ್ತಿವೆ.  ಪ್ರತಿಯೊಂದು ರಾಷ್ಟ್ರವನ್ನು ನೋಡುತ್ತಿದ್ದರೆ ಸೋಂಕಿತ ಅಥವಾ ಸೋಂಕು ಇಲ್ಲದ ರಾಷ್ಟ್ರವೆಂದು ಹೇಳಬಹುದು ಎಂದು ಅವರು ಹೇಳಿದರು. 

ಚೀನಾದ ನಡೆಯಿಂದ ಟ್ರಂಪ್ ಬೇಸರಗೊಂಡಿದ್ದಾರೆ ಎಂದು ಶ್ವೇತ ಭವನ ಮಾಧ್ಯಮ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ತಿಳಿಸಿದರು. 

ಚೀನಾದಿಂದ ಕೊರೋನಾ ವೈರಸ್ ಬಂದಿದೆ ಎಂಬುದು ನಮಗೆ ಗೊತ್ತಿದೆ. ಆದರೆ, ಏಕೆ ಮಾಹಿತಿ ಹಂಚಿಕೊಳ್ಳುತ್ತಿಲ್ಲ, ಕೆಲ ಮಾಹಿತಿ ಸ್ವೀಕರಿಸಲು ಅರ್ಹವಾಗಿಲ್ಲ, ಆದ್ದರಿಂದ ಟ್ರಂಪ್  ಚೀನಾದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು. 

ಅಮೆರಿಕಾ ನಾಗರಿಕರ ಖಾಸಗಿತನ ಅಥವಾ ವಿಶ್ವಾದ್ಯಂತ ಮುಂದಿನ ಪೀಳಿಗೆಯ ಸಂಪರ್ಕ ಸಮಗ್ರತೆಗೆ ಧಕ್ಕೆ ತರಲು ಚೀನಾದ ಕಮ್ಯೂನಿಸ್ಟ್ ಸರ್ಕಾರ ಪ್ರಯತ್ನಿಸಿದರೆ ಟ್ರಂಪ್ ಆಡಳಿತ ಸಹಿಸುವುದಿಲ್ಲ ಎಂದು ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಎಚ್ಚರಿಕೆ ನೀಡಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com