ಕೊರೋನಾ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಘೋಷಿಸಿದ ಚೀನಾ!
ಕೊರೋನಾ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಘೋಷಿಸಿದ ಚೀನಾ!

ಕೊರೋನಾ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಘೋಷಿಸಿದ ಚೀನಾ! 

ಕೊರೋನಾ ವಿರುದ್ಧ ಹೋರಾಡುವುದಕ್ಕೆ ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ 2 ಬಿಲಿಯನ್ ಡಾಲರ್ ಘೋಷಣೆ ಮಾಡಿದ್ದಾರೆ. 

ಜಿನೀವಾ: ಕೊರೋನಾ ವಿರುದ್ಧ ಹೋರಾಡುವುದಕ್ಕೆ ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ 2 ಬಿಲಿಯನ್ ಡಾಲರ್ ಘೋಷಣೆ ಮಾಡಿದ್ದಾರೆ. 

ವರ್ಲ್ಡ್ ಹೆಲ್ತ್ ಅಸೆಂಬ್ಲಿಗೆ ಮಾಡಿರುವ ಭಾಷಣದಲ್ಲಿ ಕ್ಸೀ ಜಿನ್ಪಿಂಗ್ ಕೊರೋನಾ ಸಾಂಕ್ರಾಮಿಕ ರೋಗದ ಸ್ಫೋಟದ ಬಗ್ಗೆ ವಿಶ್ವಸಂಸ್ಥೆ ಹಾಗೂ ಇತರ ರಾಷ್ಟ್ರಗಳಿಗೆ ಸೂಕ್ತ ಸಮಯದಲ್ಲಿ ವೈರಾಣುವಿನ ಜೆನೆಟಿಕ್ ಸೀಕ್ವೆನ್ಸ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ಹಂಚಿಕೊಳ್ಳಲಾಗಿದೆ ಎಂದು ಚೀನಾದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

"ಮುಂದಿನ ಎರಡು ವರ್ಷಗಳಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ 2 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನೀಡಲಿದ್ದೇವೆ ಪ್ರಮುಖವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ನೆರವು ತಲುಪಲಿದೆ" ಎಂದು ಕ್ಸೀ ಜಿನ್ಪಿಂಗ್ ತಿಳಿಸಿದ್ದಾರೆ. 

ಇತ್ತ ಯುರೋಪಿಯನ್ ಯೂನಿಯನ್ ನ 27 ಸದಸ್ಯರ ಬ್ಲಾಕ್ ಕೋವಿಡ್ ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಮೊದಲ ಹಂತದ ಪ್ರತಿಕ್ರಿಯೆಯ ಬಗ್ಗೆ ಪ್ರತ್ಯೇಕ, ಸ್ವತಂತ್ರ ಮೌಲ್ಯಮಾಪನ ನಡೆಯಬೇಕೆಂದು ಪಟ್ಟುಹಿಡಿದಿವೆ.

Related Stories

No stories found.

Advertisement

X
Kannada Prabha
www.kannadaprabha.com