ಬ್ರೆಜಿಲ್ ಅಧ್ಯಕ್ಷರೊಂದಿಗೆ ವಿಡಿಯೋ ಕಾನ್ಫರೆನ್ಸ್ ವೇಳೆ ನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ!

ಲಾಕ್ ಡೌನ್ ಕಾರಣದಿಂದಾಗಿ ಅನೇಕ ರಂಗಗಳಲ್ಲಿ ವರ್ಕ್ ಫ್ರಮ್ ಹೋಂ ಕಡ್ಡಾಯವಾಗಿ ಪರಿವರ್ತನೆಗೊಂಡಿದೆ. ಅಧಿಕಾರಿಗಳು ಸಹ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಇಂತಹ ಸಮಯದಲ್ಲಿ ಕೆಲ ಚಿತ್ರ ವಿಚಿತ್ರ ಘಟನೆಗಳು ಎದುರಾಗುತ್ತಿವೆ.
ಜೂಮ್ ವಿಡಿಯೋ ಕಾನ್ಫರೆನ್ಸ್
ಜೂಮ್ ವಿಡಿಯೋ ಕಾನ್ಫರೆನ್ಸ್

ಬ್ರೆಸಿಲಿಯಾ: ಲಾಕ್ ಡೌನ್ ಕಾರಣದಿಂದಾಗಿ ಅನೇಕ ರಂಗಗಳಲ್ಲಿ ವರ್ಕ್ ಫ್ರಮ್ ಹೋಂ ಕಡ್ಡಾಯವಾಗಿ ಪರಿವರ್ತನೆಗೊಂಡಿದೆ. ಅಧಿಕಾರಿಗಳು ಸಹ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಇಂತಹ ಸಮಯದಲ್ಲಿ ಕೆಲ ಚಿತ್ರ ವಿಚಿತ್ರ ಘಟನೆಗಳು ಎದುರಾಗುತ್ತಿವೆ. ಕೊರೋನಾ ನಿಯಂತ್ರಣದ ಭಾಗವಾಗಿ ಜಾರಿಗೊಳಿಸಲಾಗುತ್ತಿರುವ ಲಾಕ್ ಡೌನ್ ಫಲಿತಾಂಶಗಳನ್ನು ಚರ್ಚಿಸಲು ಸಾವೊ ಪಾಲೊ ಫೆಡರೇಶನ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಪಾಲೊ ಸ್ಕಾಫ್ ಜೂಮ್ ವಿಡಿಯೋ ಕಾನ್ಫರೆನ್ಸ್ ಆಯೋಜಿಸಿದ್ದರು. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಜಾನಾರೊ ಅವರೊಂದಿಗೆ ಇತರ ಹತ್ತು ಅಧಿಕಾರಿಗಳು ಕೂಡಾ ಪಾಲ್ಗೊಂಡಿದ್ದರು. ಈ ಸಮುದಲ್ಲಿ ವೀಡಿಯೊ ಕರೆಯಲ್ಲಿ ವ್ಯಕ್ತಿಯೊಬ್ಬ ನಗ್ನವಾಗಿ ಕಾಣಿಸಿಕೊಂಡಿದ್ದಾನೆ.

ಇದರಿಂದ ಗೊಂದಲಗೊಂಡ ಅಧ್ಯಕ್ಷ ಜೈಲ್ ಬೋಲ್ಸನಾರೊ, "ಪಾಲೊ, ಈ ವಿಡಿಯೋ ಕರೆಯ ಕೊನೆಯ ವ್ಯಕ್ತಿ ನಿಜಕ್ಕೂ ಚೆನ್ನಾಗಿದ್ದಾರಲ್ಲವೆ? ಎಂದು ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಇತರ ಅಧಿಕಾರಿಗಳು ಸದರಿ ವ್ಯಕ್ತಿಯನ್ನು ಕಾನ್ಫರೆನ್ಸ್ ಕರೆಯಿಂದ ತೆಗೆದುಹಾಕಿದರು. 

ಈ ವಿಡಿಯೋ ಕಾನ್ಫರೆನ್ಸ್ ಕುರಿತು ಮಾತನಾಡಿದ ಕೈಗಾರಿಕಾ ಸಚಿವ ಪಾಲೊ ಗ್ಯೂಡ್ಸ್, " ಆತ ನಗ್ನವಾಗಿ ಸ್ನಾನ ಮಾಡುತ್ತಿದ್ದಾನೆ. ಈ ಸಭೆಯಲ್ಲಿ ಬಿಸಿ ಬಿಸಿ ಮಾತುಕತೆ ನಡೆಯುತ್ತಿದ್ದರಿಂದ, ಆತ ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದಾನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. 

ಈ ವಿಡಿಯೋ ಕಾನ್ಫರೆನ್ಸ್ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ ನಲ್ಲಿ ಬ್ರೆಜಿಲ್ ನ್ಯಾಯಾಧೀಶರು ಶರ್ಟ್ ಇಲ್ಲದೆ ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದು ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com